Posts

Showing posts from January, 2022

ಡಾ. ಅಂಬೇಡ್ಕರ್ ರವರ ಶಿಕ್ಷಕ....!

ಅಂಬೇಡ್ಕರ್ ರವರ ಪೂರ್ಣ ನಾಮ _ಭೀಮ ರಾವೊ ರಾಂಜಿ_ ಎಂದು. ಅವರು ಕೆಳಜಾತಿಯಲ್ಲಿ ಹುಟ್ಟಿದ ಕಾರ್ಣ ಚಿಕ್ಕಂದಿನಲ್ಲೇ ಅನೇಕ ಕಷ್ಟ ಸಂಕಟಗಳನ್ನು ಅನುಭವಿಸಿದ್ದಾರೆ....! ಆದ್ದರಿಂದಲೇ ಅವರು ಕೆಳಜಾತಿಯ ಜನರಿಗಾಗಿ ತುಂಬಾ ಹೋರಾಟಗಳನ್ನು ಮಾಡಿದ್ದಾರೆ. ಅವರ ಚಿಕ್ಕಂದಿನಲ್ಲಿ ಶಾಲೆ ಕಲಿಯುವಾಗ ಅಲ್ಲಿನ ಶಿಕ್ಷಕರು ಮತ್ತು ಮಕ್ಕಳು ಅವರನ್ನು ಕೀಳಾಗಿ ಕಂಡು ತಮಾಷೆ ಮಾಡುತ್ತಿದ್ದರು.ಅವರನ್ನು ಇತರ ಮಕ್ಕಳ ಜೊತೆ ಕೂರಿಸದೆ ನೆಲದಲ್ಲಿ ಗೋಣಿ ಹಾಕಿ ಅದರಲ್ಲಿ ಕೂರಲು ಹೇಳುತ್ತಿದ್ದರು. ಎಲ್ಲಾ ಮಕ್ಕಳಲ್ಲೂ ಪ್ರಶ್ನೆಗಳು ಕೇಳುವಾಗ ಅಂಬೇಡ್ಕರ್ ರವರನ್ನು ಮಾತ್ರ "ನೆವರ್ ಮೈಂಡ್" ಮಾಡುತ್ತಿದ್ದರು. ಆದರೆ, ಒಂದು ಟೀಚರ್ ಮಾತ್ರ ಭೀಮ ಎಂಬ ಅಂಬೇಡ್ಕರ್ ರನ್ನು ತುಂಬಾ ಪ್ರೀತಿಸಿ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳು ಮಾಡಿ ಕೊಟ್ಟರು. ಎಷ್ಟರ ಮಟ್ಟಿಗೆ ಎಂದರೆ ಅವರು ಮನೆಯಿಂದ ತಂದ ಆಹಾರವನ್ನು ಕೂಡಾ ಅಂಬೇಡ್ಕರ್ ರವರಿಗೆ ನೀಡುತ್ತಿದ್ದರು.....!!! ಕೊನೆಗೆ ಅವರು ಕಲಿತು ಉನ್ನತ ಮಟ್ಟಕ್ಕೆ ಬೆಳೆದು ಭಾರತದ ಸಾಂವಿಧಾನವನ್ನು ರಚಿಸಿದಾಗ ತನಗೆ ಸ್ನೇಹ ಕೊಟ್ಟ ಆ ಶಿಕ್ಷಕರನ್ನು ಕಾಣಲು ಹೋಗಿದ್ದರು....!!! ಇದರಲ್ಲಿ ನಾವು ಅರ್ಥೈಸಬಹುದು......👇 ನಮ್ಮನ್ನು ಯಾರೇ ಕೀಳಾಗಿ ಕಂಡರೂ ನಾವು ಅವರ ಮುಂದೆ ತಲೆ ಭಾಗದೆ ಮೌನವಾಗಿ ನಮ್ಮ ಶಕ್ತಿಯನ್ನು ತೋರಿಸಬೇಕು. ಅಂಬೇಡ್ಕರ್ ರವರ ಜೀವನದಲ್ಲಿ ಬಂದಂತಹ ಶಿಕ್ಷಕರು ನಮ್ಮ ಜೀವನದಲ್ಲೂ ಇರುತ್ತಾರೆ. ಅದನ್ನು ನಾವು ಮನವರಿಕೆ...

ಸುನ್ನತ್ ಉಪವಾಸ

ನಮ್ಮಲ್ಲಿ ಹಲವರೂ ಸುನ್ನತ್ ಉಪವಾಸ ಹಿಡಿಯುವವರು. ಆದರೆ ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡದೆ, ಎರಡನೇ ಸ್ಥಾನದಲ್ಲಿ ನಾವು ಅದನ್ನು ಇಡುತ್ತೇವೆ. ಆದರೆ ಸ್ವಹಾಬಿಯರು ಸುನ್ನತ್ ಉಪವಾಸವನ್ನೂ ದೊಡ್ಡ ಒಂದು ಆರಾಧನೆಗಾಗಿ ಕಂಡಿದ್ದಾರೆ. ನಮಗೆ ಉದಾಹರಣೆ ನೋಡೋಣ...... ಅಬ್ದುಲ್ ರಹ್ಮಾನ್ ಔಫ್ (ರ) ರ ಬಳಿ ಒಂದು ತಟ್ಟೆ ಆಹಾರ ತಂದಿಟ್ಟರು. ಆದರೆ ಮಹಾನರಿಗೆ ಅಂದು ಉಪವಾಸವಿತ್ತು. ಮಹಾನರು ಹೇಳಿದರು... " ಹಾ.....! ಮುಸ್ಅಬ್ (ರ) ವಫಾತಾದರು, ಅವರು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು, ಅವರನ್ನು ಕಫನ್ ಮಾಡುವಾಗ ಒಂದು ತುಂಡು ಬಟ್ಟೆ ಮಾತ್ರ ಇದ್ದದ್ದು. ಅದರಿಂದ ಅವರ ಮಯ್ಯಿತ್ ನ ತಲೆ ಮರೆಸುವಾಗ ಕಾಲು ಮತ್ತು ಕಾಲು ಮಾರೆಸುವಾಗ ತಲೆ ಹೊರ ಕಾಣುತ್ತಿತ್ತು.....!!!!  ಕಾಲಚಕ್ರ ತುಂಬಾ ಉರುಳಿ ಹೋಯ್ತು. ಇಂದು ನಮಗೆ ಇಲ್ಲಿ ಅನೇಕ ಸುಖ ಸೌಕರ್ಯಗಳು ಇವೆ.ನನಗೆ ಭಯವಾಗುತ್ತಿದೆ, ಬಹುಶಃ ನಾವು ಮಾಡಿದ ಆರಾಧನೆಗಳಿಗೆ ಅಲ್ಲಾಹು ಇಹಲೋಕದಲ್ಲಿಯೇ ಪ್ರತಿಫಲ ನೀಡುತ್ತಿದ್ದಾನೆಯೇ.....? " ಎಂದು ಹೇಳಿ ಅವರು ಅತ್ತರು......!!!! ಇಲ್ಲಿ ನಾವು ಚಿಂತಿಸಬೇಕು, ಪ್ರವಾದಿ ﷺ ರ ಸುನ್ನತ್ ಎಂಬ ನೆಲೆಯಲ್ಲಿ ಉಪವಾಸ ಹಿಡಿದ ಅಬ್ದುಲ್ ರಹ್ಮಾನ್ ಔಫ್ (ರ) ರವರ ಎದುರಲ್ಲಿ ಆಹಾರದ ತಟ್ಟೆ ಇಟ್ಟಾಗ, ಆಹಾರ ಕಂಡು ತನಗೆ ಆಹಾರದ ಆಸೆ ಬರದೇ ಇರಲು ಮುಸ್ಅಬ್ ಎಂಬ ಸ್ವಹಾಬಿಯ ಚರಿತ್ರೆಯನ್ನು ನೆನಪಿಸಿ ತನ್ನ ಈಮಾನನ್ನು ಶಕ್ತಿಗೊಳಿಸುತ್ತಾರೆ.......!!!!!! ✒️ H...

ಧರ್ಮ ಯುದ್ಧ...

 *_ಧರ್ಮ ಯುದ್ಧ......_* *"""""""""""""""""""""""""""""""""* ಒಮ್ಮೆ ಒಬ್ಬ ಸ್ವಹಾಬಿವರ್ಯರು ಪ್ರವಾದಿ ﷺ ರ ಬಳಿ ಬಂದು ಧರ್ಮ ಯುದ್ಧಕ್ಕೆ ಹೊರಡಲು ಅನುಮತಿ ಕೇಳಿದರು. ಯಾ ರಸೂಲಲ್ಲಾಹು.....ﷺ *"ನಾನೂ ಈ ಧರ್ಮ ಯುದ್ಧಕ್ಕೆ ಹೊರಡಲೇ......"* ಕೂಡಲೇ ಪ್ರವಾದಿ ﷺ ರು ಕೇಳಿದರು..... *"ನಿನಗೆ ತಂದೆ ತಾಯಂದಿರು ಇದ್ದಾರೆಯೇ.....?* ಎಂದು... *"ಇದ್ದಾರೆ"* ಎಂದು ಆ ಸ್ವಹಾಬಿ ಹೇಳಿದಾಗ..... ಪ್ರವಾದಿ ﷺ ರು ಹೀಗೆ ಹೇಳಿದರು.... *"ತನ್ನ ತಂದೆ ತಾಯಂದಿರಿಗೆ ಸೇವನೆ ಮಾಡುವುದು ಧರ್ಮ ಯುದ್ಧಕ್ಕಿಂತಲೂ ಶ್ರೇಷ್ಠವಾದದ್ದು"* ಎಂದು...... *======================* *ಮದೀನಾದ ರಾಜಕುಮಾರರಿಗೆ ಇಂದಿನ ಸ್ವಲಾತ್ ಹೇಳೋಣ.....* 💖_*صلى الله عليك يا رسول الله صلى الله عليه وسلم*_ 💖 ✒️ *HAFIZ SINAN KABAKA* *_7022702610_* 💖💖💖💖💖💖💖💖💖💖💖

ಮಾತು ಸರಳವಾಗಿರಲಿ.....🗣️

 ಮಾತು ಸರಳವಾಗಿರಲಿ.....🗣️ ಪ್ರವಾದಿ ﷺ ಮನೆಯಲ್ಲಿರುವಾಗ ಒಬ್ಬ ಅಮುಸ್ಲಿಮನು ಬಂದು "ಅಸ್ಸಾಮು ಅಲೈಕುಂ" (ನಿನಗೆ ನಾಶವಿರಲಿ) ಎಂದು ಹೇಳಿದ.......... ಕೂಡಲೇ ಪ್ರವಾದಿ ﷺ ರು "ವ ಅಲೈಕುಂ" (ನಿನ್ನ ಮೇಲೆ ಇರಲಿ) ಎಂದು ಹೇಳಿದರು. ಒಳಗಿನಿಂದ ಆಯಿಷಾ (ರ) ರವರು ಹೇಳಿದರು "ಅಸ್ಸಾಮು ಅಲೈಕ ವ ಲಅ್ ನತು....."(ನಿನ್ನ ಮೇಲೆ ನಾಶವೂ ಇರಲಿ, ಅಲ್ಲಾಹನ ಶಾಪವೂ ಇರಲಿ) ಎಂದು ದ್ವೇಷದಿಂದ ಹೇಳಿದರು..... ಇದು ಕೇಳಿ ಪ್ರವಾದಿ ﷺ ರೂ ಹೇಳಿದರು, ಏಕೆ ಹಾಗೆ ದ್ವೇಷದಿಂದ ಮಾತನಾಡುವುದು....?? ನನಗೆ ವಿರುದ್ಧವಾಗಿ ಯಾರಾದರೂ ಪ್ರಾರ್ಥನೆ ಮಾಡಿದರೆ, ಅದು ಅಲ್ಲಾಹನು ಸ್ವೀಕರಿಸುವುದಿಲ್ಲ......ಆದರೆ ನಾನು ಯಾರಿಗಾದರೂ ವಿರುದ್ಧವಾಗಿ ಪ್ರಾರ್ಥಿಸಿದರೆ ಅದು ಅಲ್ಲಾಹನು ಸ್ವೀಕರಿಸುತ್ತಾನೆ....ಎಂದು. ಕೇವಲ ಒಂದು ವಾಕ್ಯದ ಮೂಲಕ ಪ್ರವಾದಿ ﷺ ರು ಆ ಅಮುಸ್ಲಿಮನಿಗೆ ಉತ್ತರ ನೀಡಿದರು...... ನಮ್ಮ ಮಾತು ಹಾಗೆ ಆಗಬೇಕು.....ಸರಳವಾಗಿ, ಸೌಮ್ಯವಾಗಿ, ಇತರರಿಗೆ ನೋವಾಗದ ರೀತಿಯಲ್ಲಿ ಮಾತನಾಡಬೇಕು. ಪ್ರವಾದಿ ﷺ ಮಾತಿನ ರೀತಿಯಲ್ಲಿ ನಮಗೆ ಹೇಗೆ ಮಾತನಾಡಬೇಕು ಎಂದು ತಿಳಿಯುತ್ತದೆ. ನಮಗೆ ಅಲ್ಲಾಹನು ಕೊಟ್ಟ ಅನುಗ್ರಹಗಳ ಪೈಕಿ ಅತೀ ಹೆಚ್ಚು ಮ ಒಂದಾಗಿದೆ ಮಾತು ಎನ್ನುವುದು. ಅದನ್ನು ಅಲ್ಲಾಹನಿಗೆ ಇಷ್ಟವಿಲ್ಲದ ಮಾರ್ಗದಲ್ಲಿ ಉಪಯೋಗಿಸದೆ, ಅವನಿಗೆ ಇಷ್ಟವಿರುವ ರೀತಿಯಲ್ಲಿ ಉಪಯೋಗಿಸುವ...... ಅಲ್ಲಾಹು ಅನುಗ್ರಹಿಸಲಿ.... آمين  آم...

ಅಶ್ರಫ್ ಕಬಕ

ಮದುವೆ ಸಮಾರಂಭ

 https://m.facebook.com/story.php?story_fbid=213806420964611&id=100070057621872 *ವಿಶ್ವ ಪ್ರವಾದಿ ﷺ ರ ಸುನ್ನತ್ ಗಳ ಪೈಕಿ ಅತಿ ಶ್ರೇಷ್ಟವಾದ ಒಂದಾಗಿದೆ ಮದುವೆ ಎನ್ನುವುದು. ಅದು ಹೇಗೆ ನಿರ್ವಹಿಸಬೇಕು ಎಂದು ಪ್ರವಾದಿ ﷺ ರೇ ನಮಗೆ ತೋರಿಸಿ ಕೊಟ್ಟಿದ್ದಾರೆ. ಪ್ರವಾದಿ ﷺ ರ ಜೀವನರೀತಿಯನ್ನು ಅನುಕರಿಸುವ ಎಲ್ಲಾ ಮುಸ್ಲಿಮರು ಮದುವೆ ಎಂಬ ಸುನ್ನತ್ ಅನ್ನು ಅತೀ ಸುಂದರವಾದ ರೀತಿಯಲ್ಲಿ ನಿರ್ವಹಿಸಿ ಜನರಿಗೆ ಮಾದರಿಯಾಗುತ್ತಿದ್ದಾರೆ.* *ಆದರೆ ಕೆಲವು ಊರುಗಳಲ್ಲಿ ಮದುಮಗನನ್ನು ವಿವಿಧ ವೇಷ ಧರಿಸಿ ಮದುಮಗಳ ಮನೆಗೆ ಕರೆದೊಯ್ಯುvವ ಒಂದು ಸಂಪ್ರದಾಯವಿದೆ. ಅದು ಇಸ್ಲಾಮಿನ ರೀತಿ ಅಥವಾ ಪ್ರವಾದಿ ﷺ ರ ಸುನ್ನತ್ ಅಲ್ಲ...* *ಹಿಂದೂ ಧರ್ಮದ ಭಕ್ತರು ಆರಾಧಿಸುವ ಕೊರಗಜ್ಜ ಎಂಬ ದೈವದ ವೇಷ ಧರಿಸಿದ ಹೆಸರಲ್ಲಿ ಆ ಮದುಮಗನ ಹೆಸರಲ್ಲಿ ಪೊಲೀಸ್ ಕೇಸ್ ನೀಡಲಾಗಿದೆ.* *ಆ ಮದುಮಗನಿಗೆ, ಜೀವನದಲ್ಲಿ ಅತೀ ಸುಂದರವಾದ ದಿನಗಳು ಪೊಲೀಸ್ ಕಸ್ಟಡಿಯಲ್ಲಿ ಕಳೆಯಬೇಕಾದ ಅವಸ್ಥೆ ಬಂದಿದೆ. ಇನ್ನು ಆ ಮದುಮಗನ ಮತ್ತು ಮದುಮಗಳ ಕುಟುಂಬದವರ ಅವಸ್ಥೆನೂ ಅಷ್ಟೇ...* *ಇಂತಹ ವಿಷಯಗಳನ್ನು ಮದುವೆಯ ಮುಂಚೆಯೇ "ನಿಗಂಟ್" ಅಥವಾ "ಒರಪ್ಪ್" ಎಂಬ ಕಾರ್ಯಕ್ರಮದಲ್ಲಿ ಚರ್ಚೆ ಮಾಡಿ ಜಾಗ್ರತೆ ವಹಿಸುವುದಾದರೆ ಅದು ತುಂಬಾ ಒಳ್ಳೆಯದು.* *ಇನ್ನು ಮುಂದೆ ನಮ್ಮವರ ಮದುವೆಗೆ ಇಂತಹ ವಿಷಯಗಳು ತಡೆಯಾಗಬಾರದು ಎಂಬ ದೃಢ ತೀರ್ಮಾನ ಕೈಗೊಂಡು ಒಳ್ಳೆಯ ರೀ...