Posts

Showing posts from July, 2022

ಮುಹರ್ರಂ - 1444

 ಮುಹರ್ರಂ - 1444 ಪ್ರವಾದಿ ﷺ ರು ಮಕ್ಕಾದಿಂದ ಮದೀನಕ್ಕೆ ತೆರಳಿದ ಅಂದಿನಿಂದ ಹಿಜರಿ ವರ್ಷ ಆರಂಭವಾಗಿದೆ. ನಮ್ಮ ಸಾಧಾರಣ ಕ್ಯಾಲೆಂಡರ್ ಅನುಸರಿಸಿ ಹೊಸ ವರ್ಷ ಆಗಮಿಸುವ ವೇಳೆ ಹೊಸ ಹೊಸ ತೀರ್ಮಾನಗಳನ್ನು  ಕೈಗೊಳ್ಳುತ್ತೇವೆ. ಮೋಟಿವೇಶನಲ್ ಸ್ಪೀಕರ್ಸ್ ಹೇಳುವುದು ಕೇಳಿದ್ದೇನೆ "ಹೊಸ ವರ್ಷ ಬರುವಾಗ ನಮ್ಮ ಜೀವನದಲ್ಲಿ ಇದುವರೆಗೂ ಇಲ್ಲದ ಕೆಲವು ಒಳ್ಳೆಯ ಹೊಸ ಹೊಸ ಕಾರ್ಯಗಳನ್ನು ನಾವು ನಮ್ಮ ಜೀವನಕ್ಕೆ ತರಬೇಕು." ಅಂದರೆ, ಆಹಾರ ರೀತಿಯಲ್ಲಿ, ಬೆಳಿಗ್ಗೆ ಏಳುವ ಸಮಯದಲ್ಲಿ, ರಾತ್ರಿ ನಿದ್ದೆ ಮಾಡುವ ಸಮಯದಲ್ಲಿ, ಆರೋಗ್ಯದ ವಿಷಯದಲ್ಲಿ...ಹೀಗೆ ಹಲವು ವಿಷಯದಲ್ಲಿ ಬದಲಾವಣೆಯನ್ನು ಹೊಸ ವ್ವರ್ಷ ಆಗಮಿಸುವಾಗ ತರುವುದು ಉತ್ತಮ ಎಂದು ಮೋಟಿವೇಶನಲ್ ಸ್ಪೀಕರ್ಸ್ ಹೇಳುವುದು ಕೇಳಿದ್ದೇನೆ. ನಮಗೆ ಈಗ ಬರುವುದು ಹಿಜರಿ ವರ್ಷ... ಇಲ್ಲಿಯೂ ನಮಗೆ ನಮ್ಮ ಜೀವನ ರೀತಿಯಲ್ಲಿ ಬದಲಾವಣೆ ತರಬಹುದು. ಆತ್ಮೀಯವಾದ ಬದಲಾವಣೆಯ ಕಡೆ ಗಮನ ಹರಿಸುವ... ಇದುವರೆಗೂ ತಹಜ್ಜುದ್ ನಮಾಝ್ ಮಾಡದ ವ್ಯಕ್ತಿಯಾಗಿರಬಹುದು, ಳುಆ ನಮಾಝ್ ಮಾಡದ ವ್ಯಕ್ತಿಯಾಗಿರಬಹುದು, ಫರ್ಳ್ ನಮಾಜಿನ ಮುಂಚೆ ಮತ್ತು ನಂತರ ರವಾತೀಬ್ ನಮಾಝ್ ಮಾಡದ ವ್ಯಕ್ತಿಯಾಗಿರಬಹುದು... ಹೀಗೆ ಆತ್ಮೀಯವಾದ ಹಲವು ವಿಷಯಗಳಲ್ಲಿ ಹಿಂದೆ ಇರುವವರಾಗಿರಬಹುದು ನಾವು... ಹೊಸ ವರ್ಷ ಆಗಮಿಸುವಾಗ ಮೇಲೆ ಹೇಳಿದ ಜೀವನ ರೀತಿಗೆ ನಮ್ಮ ಜೀವನವನ್ನು ಬದಲಾಯಿಸಲು ತೀರ್ಮಾನಿಸುವ... ಬೆಳಿಗ್ಗೆ ಸಾಧಾರಣ ಏಳುವುದಕ್ಕಿಂತ ಸ್ವಲ್ಪ ಬ...

ಮತ್ತೊಂದು ಕೊಲೆ... ಫಾಝಿಲ್

ಮತ್ತೊಂದು ಕೊಲೆ... ನಾವು ಇನ್ನೂ ಕೊಲ್ಲುತ್ತೇವೆ ಎಂದು ಒಂದು ಕಡೆಯಲ್ಲಿ... ಪ್ರತೀಕಾರ ನಮಗೂ ಇದೆ ಎಂದು ಮತ್ತೊಂದು ಕಡೆಯಲ್ಲಿ... ರಾಜಕಾರಣಿಗಳು ಅವರವರ ಕುರ್ಚಿಯಲ್ಲಿ ಕುಳಿತು, ಬಡ ಜನರನ್ನು ಚೂರಿಗೆ ಬಲಿಯರ್ಪಿಸುತ್ತಿದ್ದಾರೆ... ಪಕ್ಷಕ್ಕೆ ಏನೂ ನಷ್ಟಾಗುವುದಿಲ್ಲ... ಒಬ್ಬ ಹೋದರೆ ಮತ್ತೊಬ್ಬ... ಆದರೆ... ತಂದೆ ತಾಯಿಗೆ ನಷ್ಟವಾದ ಮಕ್ಕಳನ್ನು ತಿರುಗಿ ಸಿಗಬಹುದೇ... ಕೊಲೆಯಾದ ವ್ಯಕ್ತಿಯ ಮಕ್ಕಳಿಗೆ ಇನ್ಯಾರು ತಂದೆ... ಪ್ರೀತಿಯಿಂದ ನೋಡಿದ ಮಡದಿಗೆ ನೋವು ಸಹಿಸಲು ಸಾಧ್ಯವೇ ...?! ಸರಕಾರದಿಂದ ಸಿಗುವ ನಷ್ಟಪರಿಹಾರ, ಒಂಬತ್ತು ತಿಂಗಳು ನೊಂದು ಹೆತ್ತ ತಾಯಿಯ ದುಃಖವನ್ನು ದೂರೀಕರಿಸಲು ಸಾಧ್ಯವಿಲ್ಲ...  ಕೊಲೆಯಾದ ಆ ವ್ಯಕ್ತಿಯ ಮಕ್ಕಳು ಯಾರನ್ನು "ಅಪ್ಪಾ" ಎಂದು ಕರೆಯಲಿ... ಮನುಷ್ಯರಿಂದ ಈ ಕೃತ್ಯವನ್ನು ಮಾಡಲು ಸಾಧ್ಯವಿಲ್ಲ... ಮನುಷ್ಯರೂಪದಲ್ಲಿರುವ ಪ್ರಾಣಿಗಳು ಇವರು...!!! ಯಾವುದೇ ಕಾರಣಕ್ಕೂ ಇವರನ್ನು ಸುಮ್ಮನೆ ಬಿಡಬಾರದು... ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕು... ✒️ HSK https://hafizsinan.blogspot.com/2022/07/blog-post_29.html

ಮಸೂದ್ - ಪ್ರವೀಣ್ ಕೊಲೆ ಪ್ರಕರಣ

 ಮಸೂದ್ ನನ್ನು ಕೊಂದರು..... ಪ್ರವೀಣನನ್ನು ಕೊಂದರು..... ಇಬ್ಬರ ದೇಹದಿಂದಲೂ ಹರಿದ ರಕ್ತ ಒಂದೇ.... ಇಬ್ಬರ ಶರೀರ ಮರಣದ ನೋವನ್ನನುಭವಿಸಿದೆ..... ಮಗನನ್ನು ನಷ್ಟ ಹೊಂದಿದ ಎರಡು ಕುಟುಂಬಗಳೂ ಕಣ್ಣೀರು ಹಾಕುತ್ತಿದ್ದಾರೆ..... ಮಕ್ಕಳನ್ನು ಕಳೆದುಕೊಂಡ ನೋವಿನಿಂದ ಅಮ್ಮ - ಅಪ್ಪ ತಲೆಗೆ ಕೈಯಿಟ್ಟು ಅಳುತ್ತಿದ್ದಾರೆ....... ಇಬ್ಬರನ್ನೂ ಕೊಂದದ್ದು ವಿರುದ್ಧ ಧರ್ಮದವರೆಂದು "ಜನರು" ಹೇಳುತ್ತಿದ್ದಾರೆ..... ಆದರೆ, ಕೊಂದದ್ದು ಮುಸ್ಲಿಮರೂ ಅಲ್ಲ ಹಿಂದೂಗಳೂ ಅಲ್ಲ...... ನರ ರಾಕ್ಷಸರು....... ಮತಾಂಧರು......ನರಭೋಜಿಗಳು......!!!! ಆಡಳಿತಕ್ಕೆ ಬೇಕಾಗಿ ಇನ್ನೂ ಎಷ್ಟು ತಂದೆ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕು....... ಅಧಿಕಾರಿಗಳೇ, ಸ್ವಾರ್ಥ ಅಧಿಕಾರವನ್ನು ಬದಿಗಿಟ್ಟು ಜನರ ಕಡೆಗೆ ಗಮನ ಹರಿಸಲು ಸಮಯ ಕಂಡುಕೊಳ್ಳಿ...... ಕುರ್ಚಿಯನ್ನು ಗಟ್ಟಿಗೊಳಿಸಲು ಅಭಿಮಾನಿಗಳನ್ನು ಬಲಿಯರ್ಪಿಸಬೇಡಿ...... ✒️HSK

ಕರೆಂಟ್ ಇರುವುದೇ ಇಲ್ಲ.....

 ಕರೆಂಟ್ ಇರುವುದೇ ಇಲ್ಲ..... ಲೈನ್ ಮ್ಯಾನ್ ಗೆ ಪದೇ ಪದೇ ಕಾಲ್ ಗಳು ಹೋಗುತ್ತಲೇ ಇವೆ..... ಯಾವಾಗ ನೋಡಿದರೂ ಲೈನ್ ಮ್ಯಾನ್ ಬಿಝಿ..... ಹೀಗೆ ಹಲವಾರು ತೊಂದರೆಗಳು ನಮಗಿದೆ...... ಆ ಲೈನ್ ಮ್ಯಾನ್ ನ ಅವಸ್ಥೆ ಒಮ್ಮೆ ಯೋಚಿಸಿದ್ದೀರಾ...... ಎಲ್ಲೆಡೆಯೂ ಗಾಳಿಮಳೆ.... ಮರಗಳು ಉರುಳುತ್ತಿವೆ..... ಕರೆಂಟ್ ವಯರ್ ನ ಮೇಲೆ ಮರ ಬಿದ್ದು ಕರೆಂಟ್ ಇರುವುದಿಲ್ಲ.... ಕರೆಂಟ್ ಕಂಬ ನೆಲಕ್ಕುರುಳಿ ಕರೆಂಟ್ ಇರುವುದಿಲ್ಲ..... ಅದು ಸರಿ ಮಾಡಲು ಬೇಕಾಗಿ, ಅದೇ ಮಳೆಗೆ ಮೈಯೊಡ್ಡಿ ಕರೆಂಟ್ ಸರಿ ಮಾಡಲು ಮುಂದಾಗುವ ಲೈನ್ ಮ್ಯಾನ್ ಗೆ ಬೈದರೆ ಆಗಬಹುದೇ.....?! ನೀರಿರುವಾಗ ಕರೆಂಟ್ ಶಾಕ್ ಆಗುತ್ತದೆ ಎಂದು ಶಾಲೆಯಲ್ಲಿ ನಾವು ಕಲಿದಿದ್ದೇವೆ...... ಆದರೆ, ಇವರು ನಮ್ಮ ಮನೆಯ / ಊರಿನ ಕರೆಂಟ್ ಸರಿ ಮಾಡಲು ಧಾರಾಕಾರವಾಗಿ ಸುರಿಯುವ ಮಳೆಯ ನಡುವೆ ಮುಂದೆ ಬರುತ್ತಾರೆ......  "ಅವರು ಅವರ ಕೆಲ್ಸ ಮಾಡ್ತಾರೆ... ಅದಕ್ಕೆ ಸಂಬಳ ಕೂಡಾ ಸಿಗ್ತದೆ" ಎಂದು ನಾವು ಹೇಳಬಹುದು....... ಜೀವ ಎಲ್ಲರಿಗೂ ಒಂದೇ....ಅವರಿಗೂ ತಂದೆ ತಾಯಿ, ಮಡದಿ ಮಕ್ಕಳು ಇದ್ದಾರೆ ...... ಅವರಿಗೂ ಜೀವದ ಮೇಲೆ / ಜೀವನದ ಮೇಲೆ ಆಸೆ ಇದೆ..... ದಯವಿಟ್ಟು ಅವರಿಗೆ ಬಯ್ಯದೆ....ಅವರ ಕಷ್ಟಗಳನ್ನು ಅರ್ಥೈಸಿ ಸ್ವಲ್ಪ ಮಟ್ಟಕ್ಕೆ ಸಹಿಸಿಕೊಳ್ಳೋಣ........ HSK ✒️