Posts

Showing posts from April, 2022

ಪ್ರೀತಿ ಏನೆಂದು ತೋರಿಸಿದ ಪೀರನಗುಡಿಯ ಪ್ರೀತಿಯ ಜನರನ್ನು ಎಂದೂ ಮರೆಯಲ್ಲ...

 ಬೇಕಾದ ಊಟ ಆಹಾರ ಮಾಡಿ ಕೊಟ್ಟ ಅಮ್ಮಂದಿರು, ಏನು ಬೇಕು ಏನು ಬೇಡ ಎಂದು ಕೇಳಿ ತಿಳಿದು, ಬೇಕಾದ ರೀತಿಯಲ್ಲಿ ಸೌಕರ್ಯ ಒದಗಿಸಿದ ಊರಿನ ಜನರು, "ಅಸ್ಸಲಾಮು ಅಲೈಕುಂ ಹಾಫಿಸ್ ಸಾಬ್" ಎಂದು ದೂರದಿಂದಲೇ ತಲೆ ಬಗ್ಗಿಸಿ ಸಲಾಂ ಹೇಳುವ ಪುಟ್ಟ ಪುಟಾಣಿಗಳು, ಎಲ್ಲದಕ್ಕೂ ಸಾತ್ ಕೊಟ್ಟು ಸ್ನೇಹ ಹಂಚಿದ ಸ್ನೇಹಿತರು, ಯಾರನ್ನೂ ಕೂಡಾ ಮರೆಯಲು ಈ ಮನಸ್ಸು ಒಪ್ಪುತ್ತಿಲ್ಲ..... ಇಂದು ಬೆಳಿಗ್ಗೆ ವರೆಗೂ ಊರಿಗೆ ಹೋಗುವ ಸಂತೋಷ ಮನಸ್ಸಿನಲ್ಲಿ ಇತ್ತು...... ಜುಮುಆ ದ ಬಳಿಕ ಎಲ್ಲರಲ್ಲೂ ಹೇಳಿ ಹೊರಡುವಷ್ಟರಲ್ಲಿ, ಅಪ್ಪಿ ಹಿಡಿದು ಒಬ್ಬೊಬ್ಬರೂ ಕಣ್ಣೀರು ಹಾಕಿ "ಅಗ್ಲೆ ಸಾಲ್ ಆವೊ" ಎಂದು ಹೇಳುವಾಗ...... "ಇನ್ ಶಾ ಅಲ್ಲಾಹ್" ಎಂಬ ಒಂದು ಮಾತು ಮಾತ್ರ ನನ್ನ ಬಾಯಲ್ಲಿ ಬಂದಿದ್ದು...... 😭 ಪ್ರೀತಿ ಏನೆಂದು ತೋರಿಸಿದ ಪೀರನಗುಡಿಯ ಪ್ರೀತಿಯ ಜನರನ್ನು ಎಂದೂ ಮರೆಯಲ್ಲ........ ಖಂಡಿತ...... ❤️

ಬದ್ರಿಗೆ ಹೋಗಿ ಬರೋಣ......🤍

 ಬದ್ರಿಗೆ ಹೋಗಿ ಬರೋಣ......🤍 ಪ್ರವಾದಿ ﷺ ರು ಮತ್ತು ಸ್ವಹಾಬಿಗಳು ಮದೀನಾದಿಂದ ಹೊರಟರು..... ಎಲ್ಲವೂ ಅಲ್ಲಾಹನ ಮೇಲೆ ತವಕ್ಕುಲ್ ಮಾಡಿ, ಉಪವಾಸಿಗರಾಗಿ ಮೈಲುಗಳು ದಾಟಿ ನಡೆಯಲಾರಂಭಿಸಿದರು...... 'ಅಲ್ಲಾಹನ ಸಹಾಯ ಮತ್ತು ಪ್ರವಾದಿ ﷺ ರ ನೇತೃತ್ವ' ಇವೆರಡೇ ಸ್ವಹಾಬಿಗಳ ಆಯುಧ.......... ಸಾವಿರಕ್ಕಿಂತ ಹೆಚ್ಚು ಬರುವ ಶತ್ರುಪಕ್ಷವನ್ನು ಎದುರಿಸಲು ಉಪವಾಸಿಗರಾದ 313 ಸ್ವಹಾಬಿಗಳು ದಣಿದು ಹಸಿದು ಹೋರಾಡಿದರು.......... ಶತ್ರು ಪಕ್ಷದಿಂದ 70 ಮಂದಿ ಸಾವನ್ನಪ್ಪಿದರು, ಸ್ವಹಾಬಿಗಳಿಂದ 14 ಸ್ವಹಾಬರು ಶಹೀದ್ ಆದರು....... 'ಹೋಗುವ ದಾರಿಯಲ್ಲಿ ಸಿಗುವ ಗಿಡಮರಗಳನ್ನು ಅಕಾರಣವಾಗಿ ನೋಯಿಸಬಾರದು" ಎಂದಾಗಿತ್ತು ಪ್ರವಾದಿ ﷺ ರ ನಿರ್ದೇಶ....... ಯುದ್ಧ ದ ಕಾರಣ ಹೇಳಿ ಯಾರೂ ಉಪವಾಸ ಬಿಡಲಿಲ್ಲ..... ನಮಾಝ್ ತಪ್ಪಿಸಲಿಲ್ಲ..... ಎಲ್ಲವೂ ಅಲ್ಲಾಹನ ಸಹಾಯದಿಂದ ಅಚ್ಚುಕಟ್ಟಾಗಿ ನಡೆಸಿದರು....... ಪ್ರವಾದಿ ﷺ ರ ಪ್ರಾರ್ಥನೆಯ ಫಲವಾಗಿ ಅಲ್ಲಾಹನು ಆಕಾಶಲೋಕದಿಂದ ಮಲಕ್ಕುಗಳನ್ನೇ ಕಳುಹಿಸಿ ಕೊಟ್ಟ...... 'ಯುದ್ಧ ದ ವೇಳೆ ಸ್ವಹಾಬರು ಶತ್ರುಗಳನ್ನು ಕೊಲ್ಲುವ ಮುನ್ನವೇ ಅವರು ನೆಲಕ್ಕುರುಳುತ್ತಿದ್ದರು........' ಎಂದು ಸ್ವಹಾಬಿಯರು ಯುದ್ಧದ ಅನುಭವಗಳನ್ನು ಹೇಳುತ್ತಿದ್ದರು.......... ಕೇವಲ ಒಂದು ವಿಭಾಗ ಜನರ ಮಾತ್ರ ವಿಜಯವಲ್ಲ, ಇಸ್ಲಾಮಿನ ವಿಜಯವಾಗಿತ್ತು ಅಂದು ಬದ್ರಿನ ಯುದ್ಧಭೂಮಿಯಲ್ಲಿ ನಡೆದದ್ದು..... ಕುಟುಂಬದವರೆಲ್...

ಒಂದು ಸುನ್ನತ್ ಗೆ ಫರ್ಳ್ ನ ಪ್ರತಿಫಲ.

 *ಒಂದು ಸುನ್ನತ್ ಗೆ ಫರ್ಳ್ ನ ಪ್ರತಿಫಲ.* *____________________* *ರಂಝಾನಿನ ಅನೇಕ ಮಹತ್ವಗಳನ್ನು ಮತ್ತು ಪುಣ್ಯಗಳನ್ನು ವಿವರಿಸುವ  ಲೇಖನಗಳು, ವಿಡಿಯೋಗಳು ಹಾಗೂ ವಾಯ್ಸ್ ಕ್ಲಿಪ್ ಗಳು ಕೇಳಿರಬಹುದು.* *ಆದರೆ ನಾವು ಅರಿಯದೇ ಅನೇಕ ಚಿಕ್ಕ ಚಿಕ್ಕ ಸುನ್ನತ್ ಗಳ ಪ್ರತಿಫಲಗಳು ನಷ್ಟವಾಗುತ್ತಿದೆ.* *ಅಂದರೆ, ರಂಝಾನಿನಲ್ಲಿ ಅನೇಕ ಆರಾಧನೆಗಳು ಮಾಡುವಾಗ ಚಿಕ್ಕ ಚಿಕ್ಕ ಸುನ್ನತ್ ಗಳ ಪ್ರತಿಫಲ ನಾವು ಕಳೆದುಕೊಳ್ಳುತ್ತೇವೆ.* *ರಂಝಾನಿನಲ್ಲಿ ಮಾತ್ರ ಕಂಡು ಬರುವ ಒಂದು ನಮಾಝ್ ಆಗಿದೆ ತರಾವೀಹ್ ನಮಾಝ್.*  *ಆ ನಮಾಝ್ ಸುನ್ನತ್ ಆದರೂ ಕೂಡಾ ಮುಸ್ಲಿಮರು ಅದನ್ನು ಕಟ್ಟು ನಿಟ್ಟಿನಿಂದ ನಿರ್ವಹಿಸುತ್ತಾರೆ...* *ಕೆಲವರು ತರಾವೀಹ್ ನಮಾಝ್ ಬೇಗ ಮುಗಿಯಲು ಬೇಕಾಗಿ , ಕೈ ಕಟ್ಟಿದ ಕೂಡಲೇ ನೇರ "ಬಿಸ್ಮಿ" ಹೇಳಿ ಫಾತಿಹ ಆರಂಭಿಸುವುದು ಉಂಟು......* *ಹೀಗೆ ಮಾಡುವುದು ಕರಾಹತ್. ಆದರೆ, ಇಲ್ಲಿ "ವಜ್ಜಹ್ತು ಮತ್ತು ಅಊಝು" ಇದರ ಸುನ್ನತ್ ನಷ್ಟವಾಗುತ್ತದೆ.* *ರಂಝಾನಿನಲ್ಲಿ  ಒಂದು ಸುನ್ನತಿಗೆ ಒಂದು ಫರ್ಳ್  ಮಾಡಿದ ಪ್ರತಿಫಲ ಸಿಗುತ್ತದೆ. ನಾವೇಕೆ ಅದನ್ನು ನಷ್ಟಪಡಿಸಬೇಕು.....???* *ನೀವೇ ಆಲೋಚಿಸಿ....* ➖➖➖➖➖➖➖➖➖ 🗓️ *APRIL 0️⃣3️⃣ 2022*       *RAMALAN 0️⃣1️⃣ 1443* ✒️ *_HAFIZ MUHAMMAD SINAN KBK_* *GROUP - 2️⃣* https://chat.whatsapp.com/Hywhn8u3nYk4GVDCsHjLSy *GROUP...