Posts

Showing posts from October, 2023

ಮಾಲಿಕ್ ದೀನಾರ್

Image
ಮಾಲಿಕ್ ದೀನಾರ್ ______________________________ ಇಂದು ಸುಬ್-ಹ್ ನಮಾಝಿಗೆ ಕಾಸರಗೋಡಿನ ಮಾಲಿಕ್ ದೀನಾರ್ ಮಸೀದಿಯಲ್ಲಿದ್ದೆ. ಅನೇಕ ಕರಾಮತುಗಳ ಮೂಲಕ ಜನಮನಸ್ಸಿನಲ್ಲಿ ಸ್ಥಾನ ಪಡೆದ ಮಹಾತ್ಮರಾದ ಮಾಲಿಕ್ ದೀನಾರ್ (ರ) ರವರ ಮಖ್ಬರ ಈ ಮಸೀದಿಯ ಬಲ ಭಾಗದಲ್ಲಿದ್ದು, ಮಹಾನರ ಝಿಯಾರತ್ ಮಾಡಿ ನಮ್ಮ ಯಾತ್ರೆ ಮುಂದುವರೆಸಿದೆವು.  ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಪ್ರವಾದಿ ﷺ ರ ಕಾಲದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ತಳಂಗರ ಎಂಬ ಗ್ರಾಮಕ್ಕೆ ಕಡಲು ದಾರಿಯ ಮೂಲಕ ಬಂದ ಮಹಾನರಾಗಿದ್ದಾರೆ ಮಾಲಿಕ್ ದೀನಾರ್ (ರ). ಪ್ರವಾದಿ ﷺ ರು ತೋರಿಸಿ ಕೊಟ್ಟ ಅದೇ ರೀತಿಯಲ್ಲಿ ಅವರು ಇಸ್ಲಾಂ ಧರ್ಮವನ್ನು ಜನರಿಗೆ ತೋರಿಸಿಕೊಟ್ಟರು. ಮೊತ್ತ ಮೊದಲು ಕೇರಳಕ್ಕೆ ಬಂದಾಗ ಅಪ್ಪು ಎಂಬ ಹಿಂದೂ ಧರ್ಮದ ಓರ್ವ ವ್ಯಕ್ತಿ ತೆಂಗಿನ ನೀರು ಕೊಟ್ಟು ಸ್ವೀಕರಿಸಿದಾಗ " ಇದು ಯಾರ ಜಮೀನಿನ ತೆಂಗಿನ ಕಾಯಿ ? ಆ ವ್ಯಕ್ತಿಯ ಅನುಮತಿಯೊಂದಿಗೆ ಕೊಡುವುದೇ ?? " ಎಂದು ಮಾಲಿಕ್ ದೀನಾರ್ (ರ) ಕೇಳಿದಾಗ ಇಸ್ಲಾಮಿನ ಮೂಲಭೂತ ನಿಯಮಗಳ ಕುರಿತು ಆ ವ್ಯಕ್ತಿಗೆ ಅರ್ಥೈಸಲು ಸಾಧ್ಯವಾಯಿತು. ಅನುಮತಿಯಿಲ್ಲದೆ ಏನನ್ನೂ ತಿನ್ನಬಾರದು - ಕುಡಿಯಬಾರದು ಎಂಬ ಇಸ್ಲಾಮಿನ ನೈಜ ಸಂದೇಶ ಆ ಒಂದು ಪ್ರಶ್ನೆಯಲ್ಲಿತ್ತು. ಅದರ ನಂತರ ಆ ವ್ಯಕ್ತಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಚರಿತ್ರೆಯಲ್ಲಿ ಕಾಣಬಹುದು.  ಹೀಗೆ ಅನೇಕ ಜನರನ್ನು ಸತ್ಯ ದಾರಿಗೆ ತಂದ ಓರ್ವ ಮಹಾನ್ ವಿದ್ವಾಂಸರಾಗಿದ್ದಾರೆ ಮಾ...

ಮೊದಲ ಬಾರಿ ಕವನ ವಾಚನ ಮಾಡಿದಾಗ

ಜೀವನದಲ್ಲಿ ಮೊದಲ ಬಾರಿಗೆ ಕವನ ವಾಚನ ಮಾಡಿದಾಗ... ➖➖➖➖➖➖➖➖ ಸಅದಿಯಾ ಕನ್ನಡ ವಿಧ್ಯಾರ್ಥಿ ಸಂಘಟನೆ ನಡೆಸಿದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಜೀವನದಲ್ಲಿ ಮೊದಲ ಬಾರಿ ಕವನ ವಾಚನ ಮಾಡಲು ಅವಕಾಶ ಸಿಕ್ಕಿತು.  ಅಲ್ ಹಮ್ದುಲಿಲ್ಲಾಹ್... ನನ್ನ ತಾಯಿಯ ತಮ್ಮ ಜಿ ಎಂ ಮುಆದ್ ರವರ ಕವನ ವಾಚನ ಕೇಳಿ ಮನಸ್ಸಿನಲ್ಲಿ ಬಹಳ ಆಸೆ ಮೂಡುತ್ತಿತ್ತು. ನನಗೂ ಒಮ್ಮೆ ಹೀಗೆ ಕವನ ವಾಚನ ಮಾಡಬೇಕು ಎಂದು. ಅನೇಕ ಬಾರಿ ಹಲವರ ಕವನ ವಾಚನ ಕೇಳುತ್ತಲೇ ಇದ್ದೆ.  ಒಮ್ಮೆಯಾದರೂ ಕವನ ವಾಚನ ಮಾಡಬೇಕೆಂಬ ಆಸೆ ಮನಸ್ಸಲ್ಲಿತ್ತು. ಸಅದಿಯಾ ಕನ್ನಡ ವಿಧ್ಯಾರ್ಥಿ ಸಂಘಟನೆ (MOKS) ಮುತಅಲ್ಲಿಮರಿಗೆ ನಡೆಸಿದ ಈ ಒಂದು ಕಾರ್ಯಕ್ರಮವು ಜೀವನದಲ್ಲಿ ಕವನಗಳ ಕುರಿತು ಕಲಿಯಲು ಮತ್ತು ವಾಚನ ಮಾಡಲು ಒಂದು ಸುವರ್ಣಾವಕಾಶ ಮಾಡಿ ಕೊಟ್ಟಿದೆ. ಸಂಪೂರ್ಣವಾಗಿ ಕವನ ವಾಚನ ಮಾಡಲು ಬರದಿದ್ದರೂ... ಸಾಧ್ಯವಾದ ರೀತಿಯಲ್ಲಿ ವಾಚನ ಮಾಡಿದೆ. ಅಲ್ ಹಂದುಲಿಲ್ಲಾಹ್... ಇನ್ನೂ ಪದ ಬರೆದು ಕಲಿಯಲು ಅಲ್ಲಾಹು ತೌಫೀಖ್ ನೀಡಲಿ... ತಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆ ಸದಾ ಇರಲಿ. ✒️ нαƒιz ѕιηαη кαвαкα       12 -10 - 2023          @ ಸಅದಿಯಾ