ಮಾಲಿಕ್ ದೀನಾರ್
ಮಾಲಿಕ್ ದೀನಾರ್
______________________________
ಇಂದು ಸುಬ್-ಹ್ ನಮಾಝಿಗೆ ಕಾಸರಗೋಡಿನ ಮಾಲಿಕ್ ದೀನಾರ್ ಮಸೀದಿಯಲ್ಲಿದ್ದೆ. ಅನೇಕ ಕರಾಮತುಗಳ ಮೂಲಕ ಜನಮನಸ್ಸಿನಲ್ಲಿ ಸ್ಥಾನ ಪಡೆದ ಮಹಾತ್ಮರಾದ ಮಾಲಿಕ್ ದೀನಾರ್ (ರ) ರವರ ಮಖ್ಬರ ಈ ಮಸೀದಿಯ ಬಲ ಭಾಗದಲ್ಲಿದ್ದು, ಮಹಾನರ ಝಿಯಾರತ್ ಮಾಡಿ ನಮ್ಮ ಯಾತ್ರೆ ಮುಂದುವರೆಸಿದೆವು.
ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಪ್ರವಾದಿ ﷺ ರ ಕಾಲದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ತಳಂಗರ ಎಂಬ ಗ್ರಾಮಕ್ಕೆ ಕಡಲು ದಾರಿಯ ಮೂಲಕ ಬಂದ ಮಹಾನರಾಗಿದ್ದಾರೆ ಮಾಲಿಕ್ ದೀನಾರ್ (ರ). ಪ್ರವಾದಿ ﷺ ರು ತೋರಿಸಿ ಕೊಟ್ಟ ಅದೇ ರೀತಿಯಲ್ಲಿ ಅವರು ಇಸ್ಲಾಂ ಧರ್ಮವನ್ನು ಜನರಿಗೆ ತೋರಿಸಿಕೊಟ್ಟರು. ಮೊತ್ತ ಮೊದಲು ಕೇರಳಕ್ಕೆ ಬಂದಾಗ ಅಪ್ಪು ಎಂಬ ಹಿಂದೂ ಧರ್ಮದ ಓರ್ವ ವ್ಯಕ್ತಿ ತೆಂಗಿನ ನೀರು ಕೊಟ್ಟು ಸ್ವೀಕರಿಸಿದಾಗ " ಇದು ಯಾರ ಜಮೀನಿನ ತೆಂಗಿನ ಕಾಯಿ ? ಆ ವ್ಯಕ್ತಿಯ ಅನುಮತಿಯೊಂದಿಗೆ ಕೊಡುವುದೇ ?? " ಎಂದು ಮಾಲಿಕ್ ದೀನಾರ್ (ರ) ಕೇಳಿದಾಗ ಇಸ್ಲಾಮಿನ ಮೂಲಭೂತ ನಿಯಮಗಳ ಕುರಿತು ಆ ವ್ಯಕ್ತಿಗೆ ಅರ್ಥೈಸಲು ಸಾಧ್ಯವಾಯಿತು. ಅನುಮತಿಯಿಲ್ಲದೆ ಏನನ್ನೂ ತಿನ್ನಬಾರದು - ಕುಡಿಯಬಾರದು ಎಂಬ ಇಸ್ಲಾಮಿನ ನೈಜ ಸಂದೇಶ ಆ ಒಂದು ಪ್ರಶ್ನೆಯಲ್ಲಿತ್ತು. ಅದರ ನಂತರ ಆ ವ್ಯಕ್ತಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಚರಿತ್ರೆಯಲ್ಲಿ ಕಾಣಬಹುದು.
ಹೀಗೆ ಅನೇಕ ಜನರನ್ನು ಸತ್ಯ ದಾರಿಗೆ ತಂದ ಓರ್ವ ಮಹಾನ್ ವಿದ್ವಾಂಸರಾಗಿದ್ದಾರೆ ಮಾಲಿಕ್ ದೀನಾರ್ (ರ). ಕೇರಳದ ಕಡೆಗೆ ಝಿಯಾರತ್ ಹೊರಡುವವರು ಮಹಾನರ ಬಳಿ ಹೋಗಿ ಮಹಾನರ ಬರಕತ್ ಪಡೆಯಲು ಮರೆಯಬೇಡಿ...
ಅಲ್ಲಾಹು ಮಹಾನರ ಬರಕತ್ತಿನಿಂದ ನಮ್ಮೆಲ್ಲರ ಸದುದ್ದೇಶಗಳನ್ನು ಪೂರೈಸಲಿ ಆಮೀನ್.
✒️ нαƒιz ѕιηαη кαвαкα
27 -10 - 2023

Comments
Post a Comment