Posts

Showing posts from July, 2023

ನಮ್ಮ ಅಜಾಗರೂಕತೆ ಇತರರ ಜೀವಕ್ಕೆ ಹಾನಿಯಾಗಬಹುದು.

 ನಮ್ಮ ಅಜಾಗರೂಕತೆ ಇತರರ ಜೀವಕ್ಕೆ ಹಾನಿಯಾಗಬಹುದು. ✒️ ಹಾಫಿಲ್ ಸಿನಾನ್ ಕಬಕ ನಿನ್ನೆ ದ್ವಿಚಕ್ರ ವಾಹನದಲ್ಲಿ ಒಂದು ಯಾತ್ರೆ ಹೋದೆ. ಹೋಗುವಾಗ ಒಳ್ಳೆಯ ಮಳೆ. ಮಳೆಯಿಂದ ಪಾರಾಗಲು ರೈನ್ ಕೋಟ್ ಹಾಕಿದರೂ ಅರ್ಧಂಬರ್ಧ ಒದ್ದೆಯಾಗಿದ್ದೆ ನಾನು. ಯಾತ್ರೆಯ ಮಧ್ಯೆ 2 ಅಪಘಾತಗಳು ನಡೆದದ್ದು ಕಾಣಲು ಸಾಧ್ಯವಾಯಿತು.  1. ಒಂದು ಬಸ್ಸಿನ ಹಿಂಬದಿಯ ಒಳಗೆ ನುಗ್ಗಿದ ಒಂದು ದ್ವಿಚಕ್ರ ವಾಹನ 😱  2. ಒಂದು ಕಾರು ಮತ್ತು ಬೈಕ್ ಆಕ್ಸಿಡೆಂಟ್. ಬಸ್ಸಿನ ಹಿಂಬದಿಗೆ ನುಗ್ಗಿದ ದ್ವಿಚಕ್ರ ವಾಹನವನ್ನು ನೋಡಿದಾಗ ಅದರಲ್ಲಿದ್ದ ಚಾಲಕನ ಕುರಿತು ಒಮ್ಮೆ ಆಲೋಚಿಸಿದೆ... 😭😭 ಪಾಪ ಬಸ್ಸನ್ನು ಹಿಂಬಾಲಿಸಿ ಹೋಗುವಾಗ, ಆ ಬಸ್ಸು ಪಕ್ಕನೆ ಬ್ರೇಕ್ ಹಾಕಿದಾಗ ಬಹುಶಃ ಈ ದ್ವಿಚಕ್ರ ವಾಹನದ ಚಾಲಕನಿಗೆ ಬ್ರೇಕ್ ಸಿಗದೆ ಬಸ್ಸಿಗೆ ಗುತ್ತಿರಬಹುದು... 😭 ಅದರ "ಚಾಲಕನಿಗೆ ಏನಾಗಿದೆ" ಎನ್ನುವುದರ ಕುರಿತು ಅಲ್ಲಿ ನೆರೆದಿರುವವರಲ್ಲಿ ಕೇಳಿದರೂ ನನಗೆ ಬೇಕಾದ ರೀತಿಯಲ್ಲಿ ಉತ್ತರ ಸಿಗಲಿಲ್ಲ... ಮಳೆಯಾದ ಕಾರಣ ಹೆಚ್ಚು ಸಮಯ ಅಲ್ಲಿ ನಿಲ್ಲಲೂ ಸಾಧ್ಯವಾಗಲಿಲ್ಲ... 😭 ದ್ವಿಚಕ್ರ ವಾಹನದ ಚಾಲಕರು ತುಂಬಾ ಜಾಗ್ರತೆಯಿಂದ ವಾಹನ ಚಲಾಯಿಸಬೇಕು. ಮಳೆಯಾದ ಕಾರಣ ರಸ್ತೆಯಲ್ಲಿರುವ ಗುಂಡಿಗಳು ನೀರಿನಿಂದ ಮುಚ್ಚಿರುತ್ತದೆ. ಅತೀ ವೇಗದಲ್ಲಿರುವಾಗ ಪಕ್ಕನೆ ಬ್ರೇಕ್ ಹಾಕಿದರೆ ಚಕ್ರ ಜಾರಿ ವಾಹನ ರಸ್ತೆಗೆ ಬೀಳಲೂ ಸಾಧ್ಯತೆ ಇದೆ.  ನಮಗಾಗಿ, ನಮ್ಮ ಬರುವಿಕೆಗಾಗಿ ಕಾಯುತ್ತಿರುವ ನಮ್ಮ ...