ಸುತ್ತಮುತ್ತಲು ಒಳ್ಳೆಯದಾದರೆ, ಜನರೂ ಒಳ್ಳೆಯವರಾಗುತ್ತಾರೆ
ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಕ್ಕೆ ಹೋಗುವ ಗರಿಷ್ಠ ಜನರು, ಒಂದು ವೇಳೆ ಸುನ್ನತ್ ಜಮಾಅತಿನ ಆಶಯದಿಂದ ಹೊರಹೋಗಿ ನವೀನವಾದವನ್ನು ಹಿಂಬಾಲಿಸುತ್ತಾರೆ. ಅಲ್ಲದಿದ್ದರೆ ಇಸ್ಲಾಂ ಧರ್ಮವನ್ನೇ ತೊರೆದು ಬಿಡುತ್ತಾರೆ. ಮೊನ್ನೆ ಒಂದು ಲಾರಿ ಡ್ರೈವರ್ ಬಳಿ ಮಾತನಾಡಿದೆ. ಮಾತಿನ ಮಧ್ಯೆ ಅವರು ಹೇಳಿದರು "ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾದ ಒಬ್ಬ ವ್ಯಕ್ತಿ" ಎಂದು. ಕೇಳಿದಾಗ ನಾನು ಉತ್ಸುಕನಾದೆ. 20ನೇ ವಯಸ್ಸಿನಲ್ಲಿ ಉದ್ಯೋಗಕ್ಕಾಗಿ ಕುವೈತ್ ಗೆ ಹೋಗಿದ್ದೆ. ಅಲ್ಲಿ ನನಗೆ ಸಿಕ್ಕಿದ ಕೆಲವು ಮುಸ್ಲಿಂ ಸ್ನೇಹಿತರಿಂದ ನಾನು ಇಸ್ಲಾಂ ಧರ್ಮದ ಕುರಿತು ಕಲಿತೆ. ನಂತರ ನನ್ನ ಇಷ್ಟ ಪ್ರಕಾರವೇ ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾದೆ. ಈವಾಗ ನಾನು ಮದುವೆಯಾಗಿ 3 ಮಕ್ಕಳೊಂದಿಗೆ ಸಂತೋಷದಿಂದ ಇದ್ದೇನೆ. ಹೊರರಾಷ್ಟ್ರಕ್ಕೆ ಹೋದ ಕಾರಣವಲ್ಲ ಅವರು ಸತ್ಯದಾರಿಯಿಂದ ಜಾರಿ ತಪ್ಪುದಾರಿಯನ್ನು ಆಯ್ಕೆ ಮಾಡುವುದು, ಅವರವರು ಜೀವಿಸುವ ಸುತ್ತಮುತ್ತಲಿನ ವಾತಾವರಣವಾಗಿದೆ ಮನುಷ್ಯನನ್ನು ಸರಿದಾರಿಗೆ ಮತ್ತು ತಪ್ಪುದಾರಿಗೆ ಕೊಂಡೊಯ್ಯುವುದು. ✒️ ಹಾಫಿಝ್ ಸಿನಾನ್ ಕಬಕ