Posts

Showing posts from October, 2022

ತಾಯಿಯ ಪ್ರಶ್ನೆ...

ಒಂದೂ ವರೆ ವರ್ಷದ ಬಳಿಕ ಸಮೀರ್ ದುಬೈ ಯಿಂದ ಊರಿಗೆ ಮರಳುತ್ತಿದ್ದಾನೆ. ತಂದೆ ತಾಯಿ, ಮನೆ, ಮಡದಿ, ಮಕ್ಕಳನ್ನು ಬಿಟ್ಟು ಕುಟುಂಬಕ್ಕಾಗಿ ದುಡಿಯಲು ಆರಂಭಿಸಿ ಅದೆಷ್ಟೋ ವರ್ಷ ದುಬೈ ಯಲ್ಲಿ ಇದ್ದಾನೆ. ತಂಗಿಯ ಮದುವೆಗೆ ಎರಡು ತಿಂಗಳ ರಜೆ ಕೇಳಿ ಈಗ ರಜೆ ಸಿಕ್ಕಿದೆ. ಇನ್ನೇನು ಎರಡು ದಿನದಲ್ಲಿ ಸಮೀರ್ ಮನೆಗೆ ಹೋಗುವ ಸಂತೋಷದಲ್ಲಿದಾನೆ. ಸಂತೋಷ ತಡೆಯಲಾಗದೆ ಮನೆಯವರಲ್ಲಿ ಮಾತಾಡಲು ಮನೆಗೆ ಫೋನ್ ಮಾಡಿದ. ಎರಡನೇ ರಿಂಗ್ ಆದ ಕೂಡಲೇ ಮಡದಿ ಆಯಿಷಾ ಬಂದು ಫೋನ್ ಎತ್ತಿದಳು.  "ಹಲೋ ಅಸ್ಸಲಾಮು ಅಲೈಕುಂ ಆಯ್ಶೂ... ಹೇಗಿದ್ದೀಯ..." "ವ ಅಲೈಕುಮ್ ಸಲಾಂ... ಅಲ್ಹಮ್ದುಲಿಲ್ಲಾಹ್..." ಎಂದು ಇಬ್ಬರೂ ಮಾತುಕತೆಯಲ್ಲಿ ಮುಳುಗಿ ಹೋದರು... "ಮಾತುಕತೆಯ ಮಧ್ಯೆ ಆಯಿಷಾ ಕೇಳಿದಳು, "ನಾನು ಹೇಳಿದ ಎಲ್ಲವೂ ಖರೀದಿಸಿದ್ದೀರಿ ಅಲ್ವಾ...? ನಿಮ್ಮ ಬರುವಿಕೆಗಾಗಿ ಯೆ ಮಕ್ಕಳು ಮತ್ತು ನಾನು ಇಲ್ಲಿ ಕಾಯುತ್ತಾ ಇದ್ದೇವೆ..." ಎಂದು. ನಿನಗಲ್ಲದೆ ಬೇರೆ ಯಾರಿಗೆ ನಾನು ಖರೀದಿಸುವುದು..." ಎಂದು ಮುದ್ದಿನ ಮಾತು ಹೇಳಿ ತಂಗಿ ಮುಬೀನಾಳಿಗೆ ಫೋನ್ ಕೊಡಲು ಹೇಳಿದ. ತಂಗಿ ಫೋನ್ ಕೈಗೆ ಸಿಕ್ಕಿದ ಕೂಡಲೇ "ಅಣ್ಣಾ...ಮದುವೆಗೆ ನನ್ನ ಸ್ನೇಹಿತೆಯರು ಎಲ್ಲರೂ ಬರುತ್ತಾರೆ... ಅವರ ನಾನು ಚಂದವಾಗಿ ಕಾಣಲು ಮೇಕಪ್ ಸೆಟ್ ಹಾಕಿಯೇ ನಿಲ್ಲಬೇಕು. ನಿನ್ನಲ್ಲಿ ಹೇಳಿದ್ದೇನೆ ಅಲ್ವಾ ನಾನು...ದುಬಾರಿ ಬೆಲೆಯ ಮೇಕಪ್ ಸೆಟ್ ಗೆ... ಖರೀದಿಸಿದ್ದಿ ತ...

ತಂದೆಗೆ ಥಾಂಕ್ಸ್ ಹೇಳಿದ ಮಗ

 ಒಬ್ಬ ಶ್ರೀಮಂತ ತಂದೆ ತನ್ನ ಮಗನನ್ನು ಕರೆದುಕೊಂಡು ಊರು ತೋರಿಸಲು ಹೊರಟ. ತಮ್ಮ ಸುತ್ತ ಮುತ್ತಲಿನ ಬಡವರು ಕಷ್ಟಪಟ್ಟು ಜೀವಿಸುವುದನ್ನು ತೋರಿಸುವುದಾಗಿತ್ತು ಆ ಶ್ರೀಮಂತ ತಂದೆಯ ಉದ್ದೇಶ. ಊರು ಪೂರ್ತಿ ಸುತ್ತಿ ಮರಳುವ ವೇಳೆ ತಂದೆ ಮಗನ ಬಳಿ ಕೇಳಿದ, 'ಮಗಾ...ಟ್ರಿಪ್ ಹೇಗೆ ಇತ್ತು'.  ಮಗ  'ತುಂಬಾ ಚೆನ್ನಾಗಿತ್ತು ಅಪ್ಪಾ...' ಎಂದು ಉತ್ತರಿಸಿದ.  ತಂದೆ ಕೇಳಿದ ' ನೋಡಿದ್ದೀಯಾ, ನಮ್ಮ ಸುತ್ತ ಮುತ್ತಲಿನ ಬಡವರು ಹೇಗೆ ಕಷ್ಟಪಟ್ಟು ಜೀವಿಸುತ್ತಾರೆ ಎಂದು...'  'ಹಾ ಹೌದಪ್ಪ...' ಎಂದು ಮಗ ಉತ್ತರಿಸಿದ. ತಂದೆ ಹೇಳಿದ, ಈ ಒಂದು ಟ್ರಿಪ್ ನಲ್ಲಿ ಏನಲ್ಲ ಕಲಿತೆ ನೀನು...?  " ನಮಗೆ ಒಂದು ನಾಯಿ ಇದೆ, ಅವರಿಗೆ ನಾಲ್ಕು ಇದೆ...  ನಮಗೆ ಸ್ವಿಮ್ಮಿಂಗ್ ಪೂಲ್ ಇದೆ, ಅವರಿಗೆ ದೊಡ್ಡ ಒಂದು ನದಿಯೇ ಇದೆ... ನಮಗೆ ಟ್ಯೂಬ್ ಲೈಟ್ ಇದೆ, ಅವರಿಗೆ ತುಂಬಾ ನಕ್ಷತ್ರಗಳು ಇವೆ... ನಾವು ಆಹಾರವನ್ನು ದುಡ್ಡು ಕೊಟ್ಟು ಖರೀದಿಸಿ ತಿನ್ನುತ್ತೇವೆ, ಅವರು ಸ್ವತಃ ಬೆಳೆಸಿ ತಿನ್ನುತ್ತಾರೆ... ನಮಗೆ ರಕ್ಷಣೆಗೆ ಗೋಡೆಗಳಿವೆ, ಅವರಿಗೆ ಸ್ನೇಹಿತರು ಇದ್ದಾರೆ... ನಮಗೆ ಕಾಲ ಹರಣಕ್ಕೆ ಟಿವಿ ಇದೆ, ಅವರಿಗೆ ದೊಡ್ಡ ಕುಟುಂಬವೇ ಇದೆ... ನಾವಿಷ್ಟು ಬಡವರೆಂದು ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅಪ್ಪಾ ಎಂದು ಮಗ ಹೇಳಿದ...!! ತಂದೆ ಮಾತೇ ಹೊರಡದೆ ಮೂಕನಾಗಿ ನಿಂತುಬಿಟ್ಟ. ನೀತಿ: ನಾವು ಶ್ರೀಮಂತರೆಂದು ತೀರ್ಮಾನಿಸುವುದು ಕೇವಲ ಹಣ ...

ನಾವೂ ಕೂಡ ಶೈಖುನಾ ರ ಪೂರ್ಣಾರೋಗ್ಯಕ್ಕಾಗಿ ಪ್ರಾರ್ಥಿಸೋಣ...

 ನಮಗೆ ತುಂಬಾ ಪ್ರೀತಿಯಿರುವವರಿಗೆ ಏನಾದರೂ ಆದರೆ ಅದು ನಮಗೆ ಸಹಿಸಲು ಸಾಧ್ಯವಿಲ್ಲ...ಅವರು ಇನ್ನೂ ಅನೇಕ ಕಾಲ ನಮ್ಮೊಂದಿಗಿರಲು ಆಸೆಪಡುತ್ತೇವೆ... ಎಂಬತ್ತ ಎಂಟು ವರ್ಷ ದಾಟಿದ, ಭಾರತ ಮುಸಲ್ಮಾನರ ಏಕೈಕ ಶಕ್ತಿ ಸುನ್ನೀ ಮಕ್ಕಳ ಅಭಿಮಾನದ ನಾಯಕ ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರು ಆಸ್ಪತ್ರೆಗೆ ದಾಖಲಾದ ವಿಷಯ ಎಲ್ಲರಿಗೂ ಗೊತ್ತಿದೆ... ಉಸ್ತಾದರಿಗೆ ಆಯಾಸವಾಗಿದೆ ಎಂದು ತಿಳಿಯುವಾಗ ನಮಗೂ ಆಯಾಸವಾಗುತ್ತದೆ... ನಮಗೆ ಕೊಟ್ಟ ಆಯುಸ್ಸಿನಿಂದ ಅಲ್ಪ ಕಡಿತಗೊಳಿಸಿಯಾದರೂ ಉಸ್ತಾದರ ಆಯುಸ್ಸನ್ನು ಹೆಚ್ಚಿಸು ಅಲ್ಲಾಹ್... 😭 ಇಡೀ ಭಾರತವೆಂದಲ್ಲ... ಲೋಕವೇ ಶೈಖುನಾರಿಗೆ ಬೇಕಾಗಿ ಅವರಿಂದ ಸಾಧ್ಯವಾಗುವ ರೀತಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾರೆ. ನಾವು ಕೂಡಾ ಶೈಖುನಾ ರ ಪೂರ್ಣಾರೋಗ್ಯಕ್ಕಾಗಿ ಪ್ರಾರ್ಥಿಸೋಣ... ಉಸ್ತಾದರಿಗೆ ಇನ್ನೂ ಅನೇಕ ಕಾಲ ದೀನೀ ಸೇವನೆ ನಡೆಸಲು ಅಲ್ಲಾಹು ತೌಫೀಖ್ ನೀಡಲಿ...ಆಮೀನ್ ಯಾ ರಬ್ಬಲ್ ಆಲಮೀನ್