ತಾಯಿಯ ಪ್ರಶ್ನೆ...

ಒಂದೂ ವರೆ ವರ್ಷದ ಬಳಿಕ ಸಮೀರ್ ದುಬೈ ಯಿಂದ ಊರಿಗೆ ಮರಳುತ್ತಿದ್ದಾನೆ. ತಂದೆ ತಾಯಿ, ಮನೆ, ಮಡದಿ, ಮಕ್ಕಳನ್ನು ಬಿಟ್ಟು ಕುಟುಂಬಕ್ಕಾಗಿ ದುಡಿಯಲು ಆರಂಭಿಸಿ ಅದೆಷ್ಟೋ ವರ್ಷ ದುಬೈ ಯಲ್ಲಿ ಇದ್ದಾನೆ. ತಂಗಿಯ ಮದುವೆಗೆ ಎರಡು ತಿಂಗಳ ರಜೆ ಕೇಳಿ ಈಗ ರಜೆ ಸಿಕ್ಕಿದೆ. ಇನ್ನೇನು ಎರಡು ದಿನದಲ್ಲಿ ಸಮೀರ್ ಮನೆಗೆ ಹೋಗುವ ಸಂತೋಷದಲ್ಲಿದಾನೆ. ಸಂತೋಷ ತಡೆಯಲಾಗದೆ ಮನೆಯವರಲ್ಲಿ ಮಾತಾಡಲು ಮನೆಗೆ ಫೋನ್ ಮಾಡಿದ.

ಎರಡನೇ ರಿಂಗ್ ಆದ ಕೂಡಲೇ ಮಡದಿ ಆಯಿಷಾ ಬಂದು ಫೋನ್ ಎತ್ತಿದಳು. 

"ಹಲೋ ಅಸ್ಸಲಾಮು ಅಲೈಕುಂ ಆಯ್ಶೂ... ಹೇಗಿದ್ದೀಯ..."

"ವ ಅಲೈಕುಮ್ ಸಲಾಂ... ಅಲ್ಹಮ್ದುಲಿಲ್ಲಾಹ್..."

ಎಂದು ಇಬ್ಬರೂ ಮಾತುಕತೆಯಲ್ಲಿ ಮುಳುಗಿ ಹೋದರು...

"ಮಾತುಕತೆಯ ಮಧ್ಯೆ ಆಯಿಷಾ ಕೇಳಿದಳು, "ನಾನು ಹೇಳಿದ ಎಲ್ಲವೂ ಖರೀದಿಸಿದ್ದೀರಿ ಅಲ್ವಾ...? ನಿಮ್ಮ ಬರುವಿಕೆಗಾಗಿ ಯೆ ಮಕ್ಕಳು ಮತ್ತು ನಾನು ಇಲ್ಲಿ ಕಾಯುತ್ತಾ ಇದ್ದೇವೆ..." ಎಂದು. ನಿನಗಲ್ಲದೆ ಬೇರೆ ಯಾರಿಗೆ ನಾನು ಖರೀದಿಸುವುದು..." ಎಂದು ಮುದ್ದಿನ ಮಾತು ಹೇಳಿ ತಂಗಿ ಮುಬೀನಾಳಿಗೆ ಫೋನ್ ಕೊಡಲು ಹೇಳಿದ. ತಂಗಿ ಫೋನ್ ಕೈಗೆ ಸಿಕ್ಕಿದ ಕೂಡಲೇ "ಅಣ್ಣಾ...ಮದುವೆಗೆ ನನ್ನ ಸ್ನೇಹಿತೆಯರು ಎಲ್ಲರೂ ಬರುತ್ತಾರೆ... ಅವರ ನಾನು ಚಂದವಾಗಿ ಕಾಣಲು ಮೇಕಪ್ ಸೆಟ್ ಹಾಕಿಯೇ ನಿಲ್ಲಬೇಕು. ನಿನ್ನಲ್ಲಿ ಹೇಳಿದ್ದೇನೆ ಅಲ್ವಾ ನಾನು...ದುಬಾರಿ ಬೆಲೆಯ ಮೇಕಪ್ ಸೆಟ್ ಗೆ... ಖರೀದಿಸಿದ್ದಿ ತಾನೇ...?" 

ಮುಬೀ... ನನ್ನ ಮುದ್ದು ತಂಗಿ ಅಲ್ವಾ ನೀನು... ನೀನು ಹೇಳಿದ ಎಲ್ಲಾ ವಸ್ತುಗಳನ್ನು ಆಗಲೇ ಖರೀದಿಸಿ ಆಗಿದೆ... ನೀನು ಅದನ್ನು ಹಾಕಿ ನನ್ನ ಕಣ್ಣಾರೆ ನೋಡಬೇಕು ನನಗೆ..."

ಇದು ಕೇಳಿದ್ದೇ ತಡ... ಮುಬೀನಾ ಳ ಕಾಲು ನೆಲದಲ್ಲಿ ನಿಲ್ಲುತ್ತಿರಲಿಲ್ಲ.

ಅಮ್ಮ ಬಂದ ಕೂಡಲೇ "ಅಣ್ಣಾ...ಅಮ್ಮ ಬಂದ್ರು...ಅಮ್ಮನ ಬಳಿ ಕೊಡುತ್ತೇನೆ" ಎಂದು ಹೇಳಿ ಮುಬೀನಾ ಹೋದಳು.

ಅಮ್ಮ ಫೋನ್ ಕೈಗೆತ್ತಿದ ಕೂಡಲೇ "ಮಗಾ... ಹೊಟ್ಟೆಗೆ ಏನಾದರೂ ತಿಂದಿದ್ದೀಯ...?"

ಅಮ್ಮನ ಈ ಪ್ರಶ್ನೆ ಕೇಳಿದ ಕೂಡಲೇ, ಮಡದಿ ಮತ್ತು ತಂಗಿ ಯ ಮಾತಿನ ಭಾರ ಮನಸ್ಸಿನಿಂದ ಇಳಿದೇ ಹೋಯಿತು ಸಮೀರ್ ನಿಗೆ.

ಎಲ್ಲಾ ತಂದೆ ತಾಯಂದಿರಿಗೆ ಅವರ ಮಕ್ಕಳ ಬಳಿ ಅತಿಯಾದ ಪ್ರೀತಿ ಮತ್ತು ವಾತ್ಸಲ್ಯ ಇರುತ್ತದೆ. ಮಕ್ಕಳು ಎಷ್ಟು ದೂರವಿದ್ದರೂ ಸರಿ, ಸದಾ ಸಮಯ ತಂದೆ ತಾಯಂದಿರು ಮಕ್ಕಳನ್ನು ನೆನಪಿಸುತ್ತಲೇ ಇರುತ್ತಾರೆ.

ಇದು ಪ್ರವಾಸಿಯ ಕುರಿತು ಬರೆದ ಕಾಲ್ಪನಿಕ ಕಥೆಯಾದರೂ, ಕೆಲ ಪ್ರವಾಸಿಗಳ ಜೀವನದಲ್ಲಿ ಅನುಭವಿಸಿದ ಕಥೆಯಾಗಿರಬಹುದು. 


NB: ತಂದೆ ತಾಯಂದಿರ ಪ್ರೀತಿಯ ಸಮಾನ ಪ್ರೀತಿ ಕೊಡುವ ಹೆಂಡತಿಯಂದಿರು ಮತ್ತು ಸಹೋದರಿಯರೂ ಇದ್ದಾರೆ ಎನ್ನುವುದು ಮತ್ತೊಂದು ಸತ್ಯ.

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ