Posts

Showing posts from November, 2024

ನಿಮ್ಮ ಮನೆಗೆ ಧಾರ್ಮಿಕ ಸಂಸ್ಥೆಗಳಿಂದ ಕಲೆಕ್ಷನ್ ಗೆ ಬರುತ್ತಾರಾ ?

 ನಿಮ್ಮ ಮನೆಗೆ ಧಾರ್ಮಿಕ ಸಂಸ್ಥೆಗಳಿಂದ ಕಲೆಕ್ಷನ್ ಗೆ ಬರುತ್ತಾರಾ ??? ಇಸ್ಲಾಂ ಧರ್ಮ, ದಾನ - ಧರ್ಮಕ್ಕೆ ಅತಿಯಾದ ಮಹತ್ವ ನೀಡಿದೆ. ಅದಕ್ಕೆ ಮಿತಿಯೇನೂ ಧರ್ಮ ಹೇಳಲಿಲ್ಲ. ನಮ್ಮಲ್ಲಿ ಇರುವುದೇನೋ ಅದನ್ನು ದಾನ ಮಾಡಿದರೆ ಸಾಕು ಎಂದು ಇಸ್ಲಾಂ ಕಲಿಸಿದೆ. ಬಡವರಿಗೆ, ವಿಧವೆಯರಿಗೆ, ಅನಾಥರಿಗೆ, ದೀನೀ ವಿಧ್ಯಾಭ್ಯಾಸ ಕಲಿಯುವ ವಿದ್ಯಾರ್ಥಿಗಳಿಗೆ, ಧಾರ್ಮಿಕ ವಿಧ್ಯಾಭ್ಯಾಸ ಕಲಿಸುವ ಸಂಸ್ಥೆಗಳಿಗೆ, ಹೀಗೆ ಕೆಲ ಪ್ರತ್ಯೇಕ ಜನರಿಗೆ ಅಥವಾ ಸಮೂಹಕ್ಕೆ ದಾನ ಧರ್ಮ ಮಾಡಿದರೆ ಪ್ರತ್ಯೇಕ ಪುಣ್ಯ ಧರ್ಮ ಹೇಳಿದೆ.  ಇಂದು ಅನೇಕ ಧಾರ್ಮಿಕ ಸಂಸ್ಥೆಗಳು ನಮ್ಮ ಸುತ್ತ ಮುತ್ತಲು ತಲೆಯೆತ್ತಿ ನಿಂತಿದೆ. ಅನೇಕ ಬಡ - ನಿರ್ಗತಿಕ ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳಲ್ಲಿ ಕಲಿತು ಬೆಳೆದು ಇಂದು ಉನ್ನತ ಸ್ಥಾನದಲ್ಲಿ ತಮ್ಮ ಜೀವನ ಮುಂದಕ್ಕೆ ಸಾಗಿಸುತ್ತಿದ್ದಾರೆ. ಅವರು ಇಂದು ಅಷ್ಟೂ ಎತ್ತರಕ್ಕೆ ಏರಲು ಕಾರಣ ಈ ಕಾಣುವ ಧಾರ್ಮಿಕ ಸಂಸ್ಥೆಗಳೇ ಆಗಿದೆ.  "ಈ ಧಾರ್ಮಿಕ ಸಂಸ್ಥೆಗಳು ಇಷ್ಟೂ ಮಕ್ಕಳ ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸುವುದು...??" ಎಂಬ ಪ್ರಶ್ನೆ ಇಂದು ಹಲವರ ಮನಸ್ಸಲ್ಲಿ ಕಾಡುತ್ತಿದೆ.  ಒಬ್ಬ ಮನುಷ್ಯನಿಗೆ ಬೇಕಾದ ಆಹಾರ, ವಸತಿ, ವಸ್ತ್ರ ಮುಂತಾದ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಮೂಲಕ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ನೀಡಿ ಬೆಳೆಸುವಾಗ ಈ ಪ್ರಶ್ನೆ ಸಾಧಾರಣ...ಅಲ್ವಾ... 😊 ಧರ್ಮವನ್ನು ಪ್ರೀತಿಸಿ, ಅಲ್ಲಾಹನ ಪ್ರತಿಫಲವನ್ನ...