ವ್ಯಾಲೆಂಟೈನ್ಸ್ ಡೇ
ಇಂದು ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ ಅಂತೆ........ ಅಂದರೆ ಪ್ರೇಮಿಗಳ ದಿನ.......!!!! ಇದರ ವಾಸ್ತವ ಸಂಗತಿ ಏನೆಂದು ಗೊತ್ತೇ.....??? ಕ್ರೈಸ್ತ ಧರ್ಮದಲ್ಲಿರುವ ಜನರು ಇದನ್ನು ಮೊದಲು ಜಾರಿಗೆ ತಂದದ್ದು. ತಮ್ಮ ಧರ್ಮದ ಸಂತ ವ್ಯಾಲೆಂಟೈನ್ ನ ಹೆಸರು ಈ ದಿನಕ್ಕೆ ಹಾಕಲಾಗಿದೆ. ಈ ದಿನಕ್ಕೆ ಇವನ ಹೆಸರು ಹಾಕಲು ಕಾರಣ, ಇವನು ಪ್ರೇಮಿಗಳನ್ನು ಒಂದುಗೂಡಿಸುತ್ತಿದನಂತೆ. ಆದ ಕಾರಣ ಕ್ರೈಸ್ತರು ಈ ದಿನದಲ್ಲಿ ವ್ಯಾಲೆಂಟೈನ್ ನನ್ನು ಸ್ಮರಿಸುತ್ತಾರೆ. ಈ ದಿನ ಕ್ರೈಸ್ತ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಇದು ವಿಶ್ವದೆಲ್ಲೆಡೆ ಎಲ್ಲಾ ಧರ್ಮದ ಪ್ರೇಮಿಗಳು ಪರಸ್ಪರ ಆಚರಿಸುವ ದಿನವಾಗಿ ಮಾರ್ಪಟ್ಟಿದೆ. ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾದ ಈ ಆಚರಣೆ, ಇಂದು ಎಲ್ಲಾ ಧರ್ಮದ ಪ್ರೇಮಿಗಳು ಆಚರಿಸುತ್ತಿದ್ದಾರೆ. ಖೇದಕರವೆಂದರೆ, ಇಸ್ಲಾಂ ಸಮುದಾಯದ ಜನರೂ ಕೂಡ ಇದನ್ನು ಆಚರಿಸುತ್ತಿದ್ದಾರೆ ಎನ್ನುವುದು...!! ಮುಸ್ಲಿಂ ನಾಮಧಾರಿಗಳಾಗಿ ಅನ್ಯ ಕೋಮಿನ ಹುಡುಗ ಹುಡುಗಿಯರ ಜೊತೆ ಬೀಚ್ - ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವುದು ಇಂದು ಸರ್ವ ಸಾಧಾರಣವಾಗಿ ಮಾರ್ಪಟ್ಟಿದೆ. ಶಾಲಾ ಕಾಲೇಜುಗಳ ನೆಪ ಹೇಳಿ ಅನ್ಯರ ಜೊತೆ ಓಡಾಡುವಾಗ ಯಾವುದೇ ಪ್ರೇಮಿಗಳು ಕೂಡಾ ಚಿಂತಿಸುವುದಿಲ್ಲ, ಚಿಕ್ಕಂದಿನಿಂದ ಎಲ್ಲಾ ಕಷ್ಟ ನಷ್ಟಗಳನ್ನು ಸಹಿಸಿ ನಮ್ಮನ್ನು ಈ ಮಟ್ಟಿಗೆ ತಲುಪಿಸಿದ ತಂದೆ ತಾಯಂದಿರು ನಮ...