ವ್ಯಾಲೆಂಟೈನ್ಸ್ ಡೇ
ಇಂದು ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ ಅಂತೆ........
ಅಂದರೆ ಪ್ರೇಮಿಗಳ ದಿನ.......!!!!
ಇದರ ವಾಸ್ತವ ಸಂಗತಿ ಏನೆಂದು ಗೊತ್ತೇ.....???
ಕ್ರೈಸ್ತ ಧರ್ಮದಲ್ಲಿರುವ ಜನರು ಇದನ್ನು ಮೊದಲು ಜಾರಿಗೆ ತಂದದ್ದು. ತಮ್ಮ ಧರ್ಮದ ಸಂತ ವ್ಯಾಲೆಂಟೈನ್ ನ ಹೆಸರು ಈ ದಿನಕ್ಕೆ ಹಾಕಲಾಗಿದೆ. ಈ ದಿನಕ್ಕೆ ಇವನ ಹೆಸರು ಹಾಕಲು ಕಾರಣ, ಇವನು ಪ್ರೇಮಿಗಳನ್ನು ಒಂದುಗೂಡಿಸುತ್ತಿದನಂತೆ. ಆದ ಕಾರಣ ಕ್ರೈಸ್ತರು ಈ ದಿನದಲ್ಲಿ ವ್ಯಾಲೆಂಟೈನ್ ನನ್ನು ಸ್ಮರಿಸುತ್ತಾರೆ. ಈ ದಿನ ಕ್ರೈಸ್ತ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.
ಇದು ವಿಶ್ವದೆಲ್ಲೆಡೆ ಎಲ್ಲಾ ಧರ್ಮದ ಪ್ರೇಮಿಗಳು ಪರಸ್ಪರ ಆಚರಿಸುವ ದಿನವಾಗಿ ಮಾರ್ಪಟ್ಟಿದೆ. ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾದ ಈ ಆಚರಣೆ, ಇಂದು ಎಲ್ಲಾ ಧರ್ಮದ ಪ್ರೇಮಿಗಳು ಆಚರಿಸುತ್ತಿದ್ದಾರೆ.
ಖೇದಕರವೆಂದರೆ, ಇಸ್ಲಾಂ ಸಮುದಾಯದ ಜನರೂ ಕೂಡ ಇದನ್ನು ಆಚರಿಸುತ್ತಿದ್ದಾರೆ ಎನ್ನುವುದು...!!
ಮುಸ್ಲಿಂ ನಾಮಧಾರಿಗಳಾಗಿ ಅನ್ಯ ಕೋಮಿನ ಹುಡುಗ ಹುಡುಗಿಯರ ಜೊತೆ ಬೀಚ್ - ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವುದು ಇಂದು ಸರ್ವ ಸಾಧಾರಣವಾಗಿ ಮಾರ್ಪಟ್ಟಿದೆ.
ಶಾಲಾ ಕಾಲೇಜುಗಳ ನೆಪ ಹೇಳಿ ಅನ್ಯರ ಜೊತೆ ಓಡಾಡುವಾಗ ಯಾವುದೇ ಪ್ರೇಮಿಗಳು ಕೂಡಾ ಚಿಂತಿಸುವುದಿಲ್ಲ, ಚಿಕ್ಕಂದಿನಿಂದ ಎಲ್ಲಾ ಕಷ್ಟ ನಷ್ಟಗಳನ್ನು ಸಹಿಸಿ ನಮ್ಮನ್ನು ಈ ಮಟ್ಟಿಗೆ ತಲುಪಿಸಿದ ತಂದೆ ತಾಯಂದಿರು ನಮ್ಮನ್ನು ಪ್ರೀತಿಸಿದ ಹಾಗೆ ಯಾರಿಗೂ ಪ್ರೀತಿಸಲು ಸಾಧ್ಯವಿಲ್ಲ ಎಂದು.
ನಿಮ್ಮ ಕಡೆಯಿಂದ ಚಿಕ್ಕ ಪುಟ್ಟ ತಪ್ಪುಗಳು ಬರುವಾಗ, ಬಹುಶಃ ನಿಮ್ಮ ಪ್ರಿಯತಮ ಅಥವಾ ಪ್ರೇಯಸಿ ಕೈಕೊಟ್ಟು ಹೋಗಬಹುದು. ಆದರೆ, ನಮ್ಮ ತಂದೆ ತಾಯಂದಿರು ಹಾಗೆ ಅಲ್ಲ. ನಮ್ಮ ಕಡೆಯಿಂದ ಒಂದು ತಪ್ಪು ಬಂದರೆ, ಅದನ್ನು ತಿದ್ದಿ ಒಳ್ಳೆಯ ದಾರಿ ತೋರಿಸಿ ಕೊಡುತ್ತಾರೆ.
ಇದು ನಮ್ಮ ಸಂಸ್ಕಾರ ಅಲ್ಲ. ನಮ್ಮ ತಂದೆ ತಾಯಂದಿರಿಗೆ ಇದು ಇಷ್ಟವಿಲ್ಲ. ಪ್ರವಾದಿ ﷺ ರಿಗೆ ಇಷ್ಟವಿಲ್ಲ. ಆದ್ದರಿಂದ ನಾನು ಇಂತಹ ಕೆಟ್ಟ ಕೆಲಸಕ್ಕೆ ಹೋಗುವುದಿಲ್ಲ ಎಂದು ಮನಸ್ಸಿನಲ್ಲಿ ತೀರ್ಮಾನ ಕೈಗೊಂಡು ಇಸ್ಲಾಮಿನ ನೈಜ ಜೀವನ ನಡೆಸಲು ಪ್ರಯತ್ನಿಸೋಣ......
ಅಲ್ಲಾಹು ತೌಫೀಖ್ ನೀಡಲಿ ಆಮೀನ್
➖➖➖➖➖➖➖➖➖➖
Hafiz Sinan Kabaka
7022702610
hafizsinan70@gmail.com
Comments
Post a Comment