Posts

Showing posts from May, 2025

ರಿಯಾದ್ ನಿಂದ ಮಕ್ಕಾ ಕ್ಕೆ 🚌

0️⃣2️⃣ ರಿಯಾದಿನಿಂದ ಬಸ್ ಮೂಲಕ 10 ಗಂಟೆ ಯಾತ್ರೆ ಮಾಡಬೇಕು. ರಿಯಾದಿನಲ್ಲಿ ಕೆಲಸ ಮಾಡುವ ಪ್ರವಾಸಿಯರು ತಮ್ಮ ತಂದೆ ತಾಯಂದಿರನ್ನು ಮತ್ತು ಸಂಬಂಧಿಕರನ್ನು ರಿಯಾದಿಗೆ ಕರೆದುಕೊಂಡು ಬಂದು ಅಲ್ಲಿಂದ ಉಮ್ರಾಕ್ಕೆ ಕಳುಹಿಸುವುದು ರೂಢಿಯಾಗಿ ಬಿಟ್ಟಿದೆ. ಸಾಧಾರಣ ಊರಿನಿಂದ ನೇರ ಮಕ್ಕಾಕ್ಕೆ ಹೋಗುವುದಕ್ಕಿಂತ ಹೀಗೆ ಹೋಗುವುದು ಸುಲಭ ಎಂದು ಅವರು ಹೇಳುತ್ತಿದ್ದರು. ರಿಯಾದಿನಲ್ಲಿ ಫಜ್ರ್ ನಮಾಝ್ ಮಾಡಿ ಹೊರಟ ಯಾತ್ರೆ, ಮಗ್ರಿಬ್ ಆಗುವಾಗ ತ್ವಾಯಿಫಿನ ಖರ್ನ್ ಮನಾಝಿಲಿಗೆ ತಲುಪಿತು. ರಿಯಾದಿನಿಂದ ಉಮ್ರಾ ನಿರ್ವಹಿಸಲು ಬರುವವರಿಗೆ ಅದುವೇ ಮೀಖಾತ್. "ಮೀಖಾತ್" ಎಂದರೆ ಇಹ್ರಾಮ್ ಮಾಡುವ ಸ್ಥಳ.(ಹರಮಿನ ಹೊರಗೆ ಎಲ್ಲಿ ಬೇಕಾದರೂ ಇಹ್ರಾಂ ಮಾಡಬಹುದು). 4 ಮೀಖಾತುಗಳು ಇದೆ ಎಂದು ಹದೀಸ್ ಗ್ರಂಥಗಳಲ್ಲಿ ಕಾಣಬಹುದು. 1. ದುಲ್ ಹುಲೈಫ  2. ಜುಹ್ಫ  3. ಖರ್ನ್ ಮನಾಝಿಲ್ 4. ಯಲಂಲಂ ಭಾರತದಿಂದ ಉಮ್ರಾ ಅಥವಾ ಹಜ್ಜ್ ಯಾತ್ರೆ ಹೊರಡುವವರ ಮೀಖಾತ್ "ಯಲಂಲಂ". ✒️ ಹಾಫಿಝ್ ಸಿನಾನ್ ಕಬಕ

ಕನಸು ನನಸಾದಾಗ 🕋

0️⃣1️⃣ ಮುಸ್ಲಿಮರಾದ ಪ್ರತೀ ಒಬ್ಬರ ಮನಸ್ಸಿನಲ್ಲಿ "ಒಮ್ಮೆಯಾದರೂ ಅಲ್ಲಾಹನ ಪವಿತ್ರ ಕಅಬಾ ಸಂದರ್ಶಿಸಬೇಕು, ಮದೀನ ಝಿಯಾರತ್ ಮಾಡಬೇಕು" ಎಂಬ ಆಸೆ ಇದ್ದೇ ಇರುತ್ತದೆ. ನನಗೂ ಕೂಡಾ ಹಾಗೇ ಒಂದು ಆಸೆ ಇತ್ತು. ಆದರೆ ಸಂದರ್ಭ ಬಂದಿರಲಿಲ್ಲ. ಅಲ್ ಹಮ್ದುಲಿಲ್ಲಾಹ್ ಕಳೆದ ರಂಝಾನ್ ತಿಂಗಳಲ್ಲಿ ಪವಿತ್ರ ಉಮ್ರಾ ಮತ್ತು ಮದೀನ ಝಿಯಾರತ್ ಮಾಡಲು ಸಾಧ್ಯವಾಯಿತು. ಕಲಿಕೆಗೆ ಅಡ್ಡಿಯಾಗಬಾರದು ಎಂಬ ಉಸ್ತಾದರ ನಿರ್ದೇಶವಿದ್ದ ಕಾರಣ ರಬೀಉಲ್ ಅವ್ವಲ್ ತಿಂಗಳಲ್ಲಿ ಹೋಗಲು ಉದ್ದೇಶಿಸಿದ್ದನ್ನು ರಂಝಾನ್ ತಿಂಗಳಿಗೆ ಮುಂದೂಡಿದ್ದು. ಪ್ರೀತಿಯ ಸ್ನೇಹಿತನ ಸಹಾಯದಿಂದ ಕ್ಯಾಲಿಕಟ್ ನಿಂದ ರಿಯಾದ್ ಗೆ ಹೋಗಿ ಅಲ್ಲಿಂದ ಪ್ರತೀವಾರ ಹೊರಡುವ ಝಿಯಾರತ್ ಪ್ಯಾಕೇಜ್ ಜೊತೆ ನೇರ ಮಕ್ಕಾ ಕ್ಕೆ ಹೊರಟೆ. ✒️ ಹಾಫಿಝ್ ಸಿನಾನ್ ಕಬಕ