ಕನಸು ನನಸಾದಾಗ 🕋
0️⃣1️⃣
ಮುಸ್ಲಿಮರಾದ ಪ್ರತೀ ಒಬ್ಬರ ಮನಸ್ಸಿನಲ್ಲಿ "ಒಮ್ಮೆಯಾದರೂ ಅಲ್ಲಾಹನ ಪವಿತ್ರ ಕಅಬಾ ಸಂದರ್ಶಿಸಬೇಕು, ಮದೀನ ಝಿಯಾರತ್ ಮಾಡಬೇಕು" ಎಂಬ ಆಸೆ ಇದ್ದೇ ಇರುತ್ತದೆ. ನನಗೂ ಕೂಡಾ ಹಾಗೇ ಒಂದು ಆಸೆ ಇತ್ತು. ಆದರೆ ಸಂದರ್ಭ ಬಂದಿರಲಿಲ್ಲ. ಅಲ್ ಹಮ್ದುಲಿಲ್ಲಾಹ್ ಕಳೆದ ರಂಝಾನ್ ತಿಂಗಳಲ್ಲಿ ಪವಿತ್ರ ಉಮ್ರಾ ಮತ್ತು ಮದೀನ ಝಿಯಾರತ್ ಮಾಡಲು ಸಾಧ್ಯವಾಯಿತು. ಕಲಿಕೆಗೆ ಅಡ್ಡಿಯಾಗಬಾರದು ಎಂಬ ಉಸ್ತಾದರ ನಿರ್ದೇಶವಿದ್ದ ಕಾರಣ ರಬೀಉಲ್ ಅವ್ವಲ್ ತಿಂಗಳಲ್ಲಿ ಹೋಗಲು ಉದ್ದೇಶಿಸಿದ್ದನ್ನು ರಂಝಾನ್ ತಿಂಗಳಿಗೆ ಮುಂದೂಡಿದ್ದು. ಪ್ರೀತಿಯ ಸ್ನೇಹಿತನ ಸಹಾಯದಿಂದ ಕ್ಯಾಲಿಕಟ್ ನಿಂದ ರಿಯಾದ್ ಗೆ ಹೋಗಿ ಅಲ್ಲಿಂದ ಪ್ರತೀವಾರ ಹೊರಡುವ ಝಿಯಾರತ್ ಪ್ಯಾಕೇಜ್ ಜೊತೆ ನೇರ ಮಕ್ಕಾ ಕ್ಕೆ ಹೊರಟೆ.
✒️ ಹಾಫಿಝ್ ಸಿನಾನ್ ಕಬಕ
Comments
Post a Comment