Posts

Showing posts from September, 2023

ಪ್ರವಾದಿ ಸಂದೇಶ

 ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಅಲ್ಲಾಹನು ಒಂದು ಲಕ್ಷದ ಇಪ್ಪತ್ತ ನಾಲ್ಕು ಸಾವಿರಕ್ಕಿಂತ ಹೆಚ್ಚು ಅಂಬಿಯಾ ಮುರ್ಸಲುಗಳನ್ನು ಈ ಲೋಕಕ್ಕೆ ಕಳುಹಿಸಿದ್ದಾನೆ. ಅದರಲ್ಲಿ ಕೊನೆಯ ಪ್ರವಾದಿ ನಮ್ಮ ನೇತಾರ ವಿಶ್ವ ಗುರು ಪೈಗಂಬರ್ ಮುಹಮ್ಮದ್ ಮುಸ್ತಫಾ ﷺ ರು. ಆ ಪ್ರವಾದಿ ﷺ ರ ಜೀವನವೇ ಮುಸ್ಲಿಮರಾದ ನಮಗೆ ಸಂದೇಶ. ಆಧುನಿಕ ಕಾಲದಲ್ಲಿ ಇಸ್ಲಾಂ ಅನ್ನು ತೊರೆದು ಅನಿಸ್ಲಾಮಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಮುಸ್ಲಿಂ ನಾಮಧಾರಿಗಳಾದ ಎಲ್ಲರಲ್ಲೂ ಪ್ರವಾದಿ ﷺ ರ ಸಂದೇಶವಿದೆ. ಅಂತ್ಯ ದಿನ ಬರುವಾಗ ಅನಿಸ್ಲಾಮಿಕವಾದ ಚಟುವಟಿಕೆಗಳು ಅಲ್ಲಲ್ಲಿ ನಡೆದುಕೊಂಡಿರುವಾಗ ನನ್ನ ಸುನ್ನತ್ತ್ ನ್ನು ಹಿಂಬಾಲಿಸುವವನಿಗೆ ಯುದ್ಧದಲ್ಲಿ ಹುತಾತ್ಮರಿಗೆ ಸಿಗುವ ಪ್ರತಿಫಲವಿದೆ ಎಂದು ಪ್ರವಾದಿ ﷺ ರು ಹೇಳಿದ್ದಾರೆ. ಇಂದು ಈ ಆಧುನಿಕ ಕಾಲದಲ್ಲಿ ಒಬ್ಬ ಪೂರ್ಣ ವಿಶ್ವಾಸಿಗೆ ಮನೆಯಿಂದ ಹೊರಗೆ ಹೋಗಲು ಧೈರ್ಯ ಬರುವುದಿಲ್ಲ. ಕಾರಣ ಎಲ್ಲಿ ನೋಡಿದರೂ ಹರಾಮ್ ಕೃತ್ಯ ಕಾಣುವುದು.  ಇಂದು ಶಾಲಾ ಕಾಲೇಜುಗಳ ನೆಪ ಹೇಳಿ ನಮ್ಮ ಮಕ್ಕಳು ಮನೆಯಿಂದ ಹೊರಡುವಾಗ ಅವರ ಉದ್ದೇಶ ಅನ್ಯ ಸ್ತ್ರೀಯರ ಅಥವಾ ಪುರುಷರ ಜೊತೆ ಬೀಚ್, ಪಾರ್ಕ್ ಮುಂತಾದ ಸ್ಥಳಗಳಿಗೆ ಹೋಗಿ ಆನಂದಿಸುವುದು ಆಗಿದೆ. ಇಸ್ಲಾಮಿನಲ್ಲಿ ಹರಾಮ್ ಎಂದು ಖಂಡಿಸಿದ ಹಲವು ವಿಷಯಗಳು ಇಂದು ಹಲಾಲ್ ಆಗಿ ಪರಿವರ್ತನೆಗೊಂಡಿದೆ. ಇದಕ್ಕೆ ಕಾರಣವೇ ಆಧುನಿಕ ಕಾಲದ ಮುಸ್ಲಿಮರು.  ಪ್ರವಾದಿ ﷺ ರು ಹೇಳುತ್ತಾರೆ: ನಿಮ್ಮ ಸ್ವಂತ ತಂದೆ ತಾಯಿಯರ...

ಪ್ರವಾದಿ ಸೌಂದರ್ಯ

 ಅಲ್ಲಾಹನು ಈ ಲೋಕದಲ್ಲಿರುವ ಮನುಷ್ಯರಿಗೆ ನೀಡಿದ ಸೌಂದರ್ಯದ ದುಪ್ಪಟ್ಟು ಸೌಂದರ್ಯವನ್ನು ಪ್ರವಾದಿ ﷺ ರಿಗೆ ನೀಡಿದ್ದಾನೆ. ಈ ಲೋಕದ ಮೊತ್ತ ಸೌಂದರ್ಯವನ್ನು ಒಂದು ವೃತ್ತವಾಗಿ ತೆಗೆದುಕೊಂಡರೆ, ಅದರ ನಾಲ್ಕರ ಒಂದು ಭಾಗವನ್ನು ಈ ಲೋಕದಲ್ಲಿರುವ ಎಲ್ಲಾ ಮನುಷ್ಯರಿಗೆ ನೀಡಿದ. ಆ ನಾಲ್ಕನೇ ಒಂದು ಭಾಗ ಸೌಂದರ್ಯದಲ್ಲಿ ಆದ್ಯಪಿತ ಆದಂ ನಬಿ (ಅ) ರಿಂದ ಅಂತ್ಯ ದಿನದವರೆಗೆ ಬರುವ ಮನುಷ್ಯರ ಸೌಂದರ್ಯ ಒಳಪಟ್ಟಿದೆ. ಮತ್ತೊಂದು ನಾಲ್ಕನೇ ಒಂದು ಭಾಗ ಸೌಂದರ್ಯವನ್ನು ಅಲ್ಲಾಹನು ಯೂಸುಫ್ ನಬಿ (ಅ) ರಿಗೆ ನೀಡಿದ. ಆ ಸೌಂದರ್ಯವನ್ನು ನೋಡಿದ ಝಲೀಖ ಬೀವಿ ಯ ಅರಮನೆಯಲ್ಲಿದ್ದ ಸ್ತ್ರೀಯರು ನಿಬ್ಬೆರಗಾಗಿ ಕೈಯನ್ನೇ ಕತ್ತರಿಸಿದರು.  ಆ ಸೌಂದರ್ಯಕ್ಕೆ ಮನಸೋಲದ ಯಾವುದೇ ಸ್ತ್ರೀ ಅಂದು ಇರಲಿಲ್ಲ. ಇನ್ನು ಬಾಕಿಯಿರುವ ಅರ್ಧ ಸೌಂದರ್ಯವನ್ನು, ಅಂದರೆ ಲೋಕದಲ್ಲಿರುವ ಎಲ್ಲರಿಗೂ ಮತ್ತು ಯೂಸುಫ್  ನಬಿ (ಅ) ರಿಗೆ ನೀಡಿದ ಸೌಂದರ್ಯವನ್ನು ಅಲ್ಲಾಹು ಪ್ರವಾದಿ ﷺ ರಿಗೆ ನೀಡಿದ.  ಯಾರೂ ಕೂಡ ಪ್ರವಾದಿ ﷺ ರ ಸೌಂದರ್ಯವನ್ನು ನಗ್ನ ನೇತ್ರದಿಂದ ನೋಡಲಿಲ್ಲ. ಒಬ್ಬರು ಸ್ವಹಾಬಿ ಹೇಳುತ್ತಾರೆ, ಪ್ರವಾದಿ ﷺ ರ ಮೂಲ ಸೌಂದರ್ಯವನ್ನು ನಮ್ಮ ಬರೀ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಎಂದು. ಪ್ರವಾದಿ ﷺ ರ ಮುಖದ ಮತ್ತು ಆ ಮುಖವನ್ನು ನೋಡುವ ಕಣ್ಣುಗಳೆಡೆಯಲ್ಲಿ ಒಂದು ಪರದೆಯನ್ನು ಅಲ್ಲಾಹು ತಯಾರಿಸಿದ್ದಾನೆ.  ಕೆಲ ಮಹಾತ್ಮರು ಪ್ರವಾದಿ ﷺ ರ ಸೌಂದರ್ಯವನ್ನು ಚಂದ್ರನಿಗ...