ಪ್ರವಾದಿ ಸಂದೇಶ

 ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಅಲ್ಲಾಹನು ಒಂದು ಲಕ್ಷದ ಇಪ್ಪತ್ತ ನಾಲ್ಕು ಸಾವಿರಕ್ಕಿಂತ ಹೆಚ್ಚು ಅಂಬಿಯಾ ಮುರ್ಸಲುಗಳನ್ನು ಈ ಲೋಕಕ್ಕೆ ಕಳುಹಿಸಿದ್ದಾನೆ. ಅದರಲ್ಲಿ ಕೊನೆಯ ಪ್ರವಾದಿ ನಮ್ಮ ನೇತಾರ ವಿಶ್ವ ಗುರು ಪೈಗಂಬರ್ ಮುಹಮ್ಮದ್ ಮುಸ್ತಫಾ ﷺ ರು. ಆ ಪ್ರವಾದಿ ﷺ ರ ಜೀವನವೇ ಮುಸ್ಲಿಮರಾದ ನಮಗೆ ಸಂದೇಶ. ಆಧುನಿಕ ಕಾಲದಲ್ಲಿ ಇಸ್ಲಾಂ ಅನ್ನು ತೊರೆದು ಅನಿಸ್ಲಾಮಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಮುಸ್ಲಿಂ ನಾಮಧಾರಿಗಳಾದ ಎಲ್ಲರಲ್ಲೂ ಪ್ರವಾದಿ ﷺ ರ ಸಂದೇಶವಿದೆ. ಅಂತ್ಯ ದಿನ ಬರುವಾಗ ಅನಿಸ್ಲಾಮಿಕವಾದ ಚಟುವಟಿಕೆಗಳು ಅಲ್ಲಲ್ಲಿ ನಡೆದುಕೊಂಡಿರುವಾಗ ನನ್ನ ಸುನ್ನತ್ತ್ ನ್ನು ಹಿಂಬಾಲಿಸುವವನಿಗೆ ಯುದ್ಧದಲ್ಲಿ ಹುತಾತ್ಮರಿಗೆ ಸಿಗುವ ಪ್ರತಿಫಲವಿದೆ ಎಂದು ಪ್ರವಾದಿ ﷺ ರು ಹೇಳಿದ್ದಾರೆ. ಇಂದು ಈ ಆಧುನಿಕ ಕಾಲದಲ್ಲಿ ಒಬ್ಬ ಪೂರ್ಣ ವಿಶ್ವಾಸಿಗೆ ಮನೆಯಿಂದ ಹೊರಗೆ ಹೋಗಲು ಧೈರ್ಯ ಬರುವುದಿಲ್ಲ. ಕಾರಣ ಎಲ್ಲಿ ನೋಡಿದರೂ ಹರಾಮ್ ಕೃತ್ಯ ಕಾಣುವುದು. 

ಇಂದು ಶಾಲಾ ಕಾಲೇಜುಗಳ ನೆಪ ಹೇಳಿ ನಮ್ಮ ಮಕ್ಕಳು ಮನೆಯಿಂದ ಹೊರಡುವಾಗ ಅವರ ಉದ್ದೇಶ ಅನ್ಯ ಸ್ತ್ರೀಯರ ಅಥವಾ ಪುರುಷರ ಜೊತೆ ಬೀಚ್, ಪಾರ್ಕ್ ಮುಂತಾದ ಸ್ಥಳಗಳಿಗೆ ಹೋಗಿ ಆನಂದಿಸುವುದು ಆಗಿದೆ. ಇಸ್ಲಾಮಿನಲ್ಲಿ ಹರಾಮ್ ಎಂದು ಖಂಡಿಸಿದ ಹಲವು ವಿಷಯಗಳು ಇಂದು ಹಲಾಲ್ ಆಗಿ ಪರಿವರ್ತನೆಗೊಂಡಿದೆ. ಇದಕ್ಕೆ ಕಾರಣವೇ ಆಧುನಿಕ ಕಾಲದ ಮುಸ್ಲಿಮರು. 

ಪ್ರವಾದಿ ﷺ ರು ಹೇಳುತ್ತಾರೆ: ನಿಮ್ಮ ಸ್ವಂತ ತಂದೆ ತಾಯಿಯರಿಗಿಂತ, ಮಡದಿ ಮಕ್ಕಳಿಗಿಂತ, ಸೊತ್ತು ಸಂಪತ್ತಿಗಿಂತ, ಸ್ವಂತ ಶರೀರಕ್ಕಿಂತ ನನ್ನನ್ನು ಪ್ರೀತಿಸುವ ತನಕ ಯಾರೂ ಕೂಡ ಪೂರ್ಣ ವಿಶ್ವಾಸಿಯಾಗುವುದಿಲ್ಲ ಎಂದು. ಈ ಒಂದು ಹದೀಸ್ ನಮಗೆ ದೊಡ್ಡ ಪಾಠವನ್ನೇ ಹೇಳಿಕೊಡುತ್ತದೆ. 

ಸೌಂದರ್ಯ ಕಂಡು, ಸಂಪತ್ತು ಕಂಡು ಅನ್ಯರ ಹಿಂದೆ ಹೋಗುವ ಹೆಣ್ಣು ಮತ್ತು ಗಂಡು ಚಿಂತಿಸಬೇಕಾದ ಹದೀಸ್ ಇಂದು. ಪ್ರವಾದಿ ﷺ ರಷ್ಟು ಸೌಂದರ್ಯವಿರುವ ಯಾರೂ ಕೂಡ ಇಂದಿನವರೆಗೂ ಹುಟ್ಟಲಿಲ್ಲ, ಇನ್ನು ಹುಟ್ಟುವುದೂ ಇಲ್ಲ. ಪ್ರವಾದಿ ﷺ ರ ಒಪ್ಪಿಗೆಯಿದ್ದರೆ ಉಹ್ದ್ ಪರ್ವತವನ್ನೇ ಚಿನ್ನವಾಗಿ ಮಾರ್ಪಡಿಸುತ್ತೆನೆ ಎಂದು ಅಲ್ಲಾಹು ಹೇಳಿದ್ದಾನೆ. ಈ ಲೋಕದಲ್ಲಿ ಪ್ರವಾದಿ ﷺ ರನ್ನು ಪ್ರೀತಿಸುವುದು ಕಡ್ಡಾಯವೆಂದೇ ಹೇಳಬಹುದು, ಕಾರಣ, ಜೀವನದ ಕೊನೆಯ ಹಂತದಲ್ಲೂ ಉಮ್ಮತೀ ಉಮ್ಮತೀ ಎಂದು ಹೇಳಿಯಾಗಿದೆ ಕೊನೆಯಸಿರು ಬಿಟ್ಟದ್ದು...!

ಅಂಥಹಾ ಪ್ರವಾದಿ ﷺ ರು ನಮಗೆ ತೋರಿಸಿದ ದಾರಿಯಲ್ಲಿ ನಾವು ಸಂಚರಿಸಬೇಕು. ಪ್ರವಾದಿ ﷺ ರ ಸುನ್ನತ್ ಸಾಧ್ಯವಾದಷ್ಟು ಮಾಡಿ ಪುಣ್ಯ ಪಡೆಯಬೇಕು.

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ