ವೃದ್ಧಾಶ್ರಮದಲ್ಲಿ ಒಂದು ಸಂಜೆ
ನಮ್ಮ ಅಜ್ಜ ಅಜ್ಜಿಯಂದಿರ ಪ್ರಾಯವಿರುವ ಕೆಲವು ಅಜ್ಜಂದಿರು. ಎಲ್ಲರ ಮುಖದಲ್ಲೂ ಏನೋ ಒಂದು ನಷ್ಟವಾದ ಭಾವನೆ. ಮನಸ್ಸಲ್ಲಿ ಏನೋ ಒಂದು ಬಚ್ಚಿಟ್ಟು ಅನಿವಾರ್ಯ ಮುಗುಳ್ನಗೆಯನ್ನು ಬೀರುವ ಪ್ರಸನ್ನ ಮುಖ. ಅಜ್ಮೀರ್ ಖ್ವಾಜಾ (ರ) ರ ಹೆಸರಲ್ಲಿ ಕೆಲವು ಹಣ್ಣು ಹಂಪಲುಗಳ ಕಿಟ್ಟ್ ವಿತರಣೆ ಮಾಡಿ ಕೊನೆಗೆ 15ರಷ್ಟು ಕಿಟ್ ಗಳು ಬಾಕಿಯಾದಾಗ ಜಾಬಿರ್ ಸಖಾಫಿ ಉಸ್ತಾದರ ನಿರ್ದೇಶ ಪ್ರಕಾರ ನಾವು ವೃದ್ಧಾಶ್ರಮಕ್ಕೆ ತೆರಳಿದೆವು. ನಾವು ಅಲ್ಲಿಗೆ ತಲುಪಿದಾಗ ಒಂದು ಚಿಕ್ಕ ಮನೆ. ಮನೆಯ ಮುಂದೆಯಿರುವ ಬೀದಿಯ ಬಳಿ ಕುಳಿತು ಒಬ್ಬ ತಾತ ಬೀಡಿ ಸೇದುತ್ತಾ ಕುಳಿತಿದ್ದರು. ಅವರ ಪಕ್ಕದಲ್ಲೇ ವೃದ್ಧಾಶ್ರಮದ ಬೋರ್ಡ್ ಇತ್ತು. ಆ ಚಿಕ್ಕ ಮನೆಯ ಎದುರುಗಡೆ ನಾವು ಗಾಡಿ ನಿಲ್ಲಿಸಿದಾಗ ಆ ಮನೆಯ ಸಿಟೌಟ್ ನಲ್ಲಿ ಕುಳಿತಿದ್ದ ಅಜ್ಜಂಡಿರು ನಮ್ಮನ್ನು ಸ್ವೀಕರಿಸುವ ಮಟ್ಟಿನಲ್ಲಿ ಎದ್ದು ನಿಂತರು. ನಗುಮುಖದಿಂದ ಬಂದು ಕೈಕೊಟ್ಟು ಸ್ವೀಕರಿಸಿದರು. ಬೆಂಚ್ ಸರಿ ಮಾಡಿ ಕೂರಲು ಹೇಳಿದರು. ಆಗಲೇ ಒಳಗಿನಿಂದ ಒಬ್ಬರು ಮಹಿಳೆ ಬಂದು ಕುಡಿಯಲು ಕುಡಿಯಲು ಚಾ ಹಾಕಲೇ ಎಂದು ಕೇಳಿದಾಗ "ಬೇಡ, ನಾವು ಈಗಷ್ಟೇ ಕುಡಿದು ಬಂದದ್ದು" ಎಂದು ಹೇಳಿ ಅವರನ್ನು ತಡೆದೆವು. ಜೀವನದಲ್ಲೇ ಮೊದಲ ಬಾರಿ ವೃದ್ಧಾಶ್ರಮ ಸಂದರ್ಶಿಸಿದ ಕಾರಣ ಅವರಲ್ಲಿ ಏನೇನು ಮಾತನಾಡಬೇಕು ಎಂದು ಐಡಿಯಾ ಇರಲಿಲ್ಲ. ಅವರಲ್ಲಿದ್ದ ಒಬ್ಬರು ಲಕ್ಷ್ಮಾನಂದ ಎಂಬ ಸ್ವಾಮಿ ನಮಗೆ ಅವರು ವಾಸಿಸುವ ಕೊಠಡಿಗಳನ್ನು ತೋರಿಸಿ ಕೊ...