ಕಳೆದ ವರ್ಷ ಹಜ್ಜ್ ಗೆ ಹೊರಟ ಒಬ್ಬರು ಹೇಳಿದ ಮಾತು
ಒಂದು ತಿಂಗಳು ಮಕ್ಕಾದಲ್ಲಿ ನಿಂತು ಮದೀನಾ ರೌಳಾ ಝಿಯಾರತ್ ಮಾಡಲು ಹೋಗುವಾಗ ಮದೀನಾ ದ ಹಸಿರು ಗುಂಬಝನ್ನು ನೋಡುವ ಆತುರ ಮನಸ್ಸಲ್ಲಿರುವಾಗ ಮತ್ತೊಂದು ಕಡೆ ಮನಸ್ಸು ಮತ್ತು ಶರೀರ ತುಂಬಾ ನೋವಾಗುತ್ತದೆ...ಅಲ್ಲಾಹನ ಭವನಕ್ಕೆ ವಿದಾಯ ಹೇಳಿ ಹೋಗುವ ಆ ಸಂದರ್ಭ...ಮಾತೇ ಬರದ ಮೂಕರಾಗಿ ಬಿಡುತ್ತೇವೆ ನಾವು...
ಅಂದು ಪ್ರವಾದಿ ﷺ ರು ಮತ್ತು ಮುಹಾಜಿರುಗಳಾದ ಸ್ವಹಾಬರು ವರ್ಷಗಳ ಕಾಲ ವಾಸಿಸಿದ ಮಕ್ಕಾವನ್ನು ಬಿಟ್ಟು ಮದೀನಕ್ಕೆ ವಲಸೆ (ಹಿಜ್ರಾ) ಹೋಗುವಾಗ ಎಷ್ಟು ದುಃಖಿಸಿರಬಹುದು...
ಸೊತ್ತು ಸಂಪತ್ತುಗಳನ್ನು ತೊರೆದು ಹೋಗುವ ಆ ವಲಸೆ ಇಂದು ಲೋಕವೇ ಸ್ಮರಿಸುತ್ತಿದೆ...
(ಕಳೆದ ವರ್ಷ ಹಜ್ಜ್ ಗೆ ಹೊರಟ ಒಬ್ಬರು ಹೇಳಿದ ಮಾತು)
✒️ Hafiz Sinan Kabaka
Comments
Post a Comment