ರಬೀಇನ ಸತ್ಕಾರ
ರಬಿಉಲ್ ಅವ್ವಲ್ 12 ರ ಮುಂಜಾನೆ ಮಅದಿನ್ ಗ್ರ್ಯಾಂಡ್ ಮಸ್ಜಿದ್ ನಲ್ಲಿ ನಡೆದ ಮೌಲಿದ್ ಮಜ್ಲಿಸ್ ನಲ್ಲಿ ಭಾಗವಹಿಸಿ ಊರಿಗೆ ಹೊರಟೆ. ಬರುವ ದಾರಿಯಲ್ಲಿ ಕಾಞಂಗಾಡಿನ ಚಿತ್ತಾರಿ ಎಂಬಲ್ಲಿ ರಸ್ತೆ ಬದಿಯಲ್ಲಿ ಒಂದು ಪುಟ್ಟ ಟೆಂಟ್ ಹಾಕಿ ಜೂಸ್ ಕೊಡುವುದನ್ನು ಕಂಡು ಗಾಡಿ ನಿಲ್ಲಿಸಿದೆವು. ಗಾಡಿ ನಿಲ್ಲಿಸಿದ ಕೂಡಲೇ ಒಬ್ಬರು ನಮ್ಮ ಬಳಿ ಬಂದು "ಉಸ್ತಾದೇ...ಎಲ್ಲಿಗೆ ಹೊರಟಿದ್ದು ? ಊಟ ಮಾಡಿದ್ದೀರಾ ?" ಎಂದು ಕೇಳಿದರು. ಜುಮಾ ಕಳೆದು ಮುಂದೆ ಸಿಗುವ ಹೋಟೆಲಿನಲ್ಲಿ ಊಟ ಮಾಡಬೇಕೆಂದು ಪ್ಲಾನ್ ಹಾಕಿದ ನಮಗೆ ಆ ಪ್ರಶ್ನೆ ಕೇಳಿ ತುಂಬಾ ಸಂತೋಷವಾಯಿತು. ಚಿತ್ತಾರಿ ಮಸೀದಿಯ ಎದುರುಗಡೆ ಇರುವ ಮನೆಗೆ ನಮ್ಮನ್ನು ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಊಟ ಕೊಟ್ಟರು. ಊಟ ಮಾಡಿದ ನಂತರ ನಾವು ಮನೆಯೊಡೆಯನ ಬಳಿ ಹೋಗಿ "ಯಾ ಅಕ್ರಮ ಬೈತ್" ಹಾಡಿ ದುಆ ಮಾಡಿ ಮರಳುವ ವೇಳೆಯಲ್ಲಿ ಆ ವ್ಯಕ್ತಿ ತುಂಬಾ ವಿಷಯ ಹೇಳಿದರು. ಅನೇಕ ವರ್ಷಗಳಿಂದ ಪ್ರತೀ ವರ್ಷ ರಬಿಉಲ್ ಅವ್ವಲ್ 12 ರಂದು ಊರಿನ ಜನರಿಗೆ ಊಟ ಕೊಡುತ್ತಿದ್ದಾರೆ ಅವರು. ಸುಲ್ತಾನುಲ್ ಉಲಮಾ ಮತ್ತು ಬದ್ರುಸ್ಸಾದಾತ್ ತಙಳರಂತಹ ಮಹಾ ವ್ಯಕ್ತಿಗಳು ಆ ಭಾಗಕ್ಕೆ ಬಂದರೆ ಇವರ ಮನೆಯಲ್ಲಿ ಆಹಾರ ಮತ್ತು ರೂಮಿನ ವ್ಯವಸ್ಥೆ ಮಾಡಿ ಕೊಡುವುದಂತೆ. ಇನ್ನೂ ಅನೇಕ ವರ್ಷ ಹೀಗೆ ಕೊಡಲು ಆಸೆ ಇದೆ, ದುಆ ಮಾಡಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು. ಅಲ್ಲಿಂದ ಹೊರಡುವಾಗ ಮೊದಲು ಕಂಡ ಜೂಸ್ ಟೆಂಟಿನ ಬಳಿ ಹೋದೆವು. ಅಲ್ಲ...