ರಿಯಾದ್ ನಿಂದ ಮಕ್ಕಾ ಕ್ಕೆ 🚌
0️⃣2️⃣
ರಿಯಾದಿನಿಂದ ಬಸ್ ಮೂಲಕ 10 ಗಂಟೆ ಯಾತ್ರೆ ಮಾಡಬೇಕು. ರಿಯಾದಿನಲ್ಲಿ ಕೆಲಸ ಮಾಡುವ ಪ್ರವಾಸಿಯರು ತಮ್ಮ ತಂದೆ ತಾಯಂದಿರನ್ನು ಮತ್ತು ಸಂಬಂಧಿಕರನ್ನು ರಿಯಾದಿಗೆ ಕರೆದುಕೊಂಡು ಬಂದು ಅಲ್ಲಿಂದ ಉಮ್ರಾಕ್ಕೆ ಕಳುಹಿಸುವುದು ರೂಢಿಯಾಗಿ ಬಿಟ್ಟಿದೆ. ಸಾಧಾರಣ ಊರಿನಿಂದ ನೇರ ಮಕ್ಕಾಕ್ಕೆ ಹೋಗುವುದಕ್ಕಿಂತ ಹೀಗೆ ಹೋಗುವುದು ಸುಲಭ ಎಂದು ಅವರು ಹೇಳುತ್ತಿದ್ದರು. ರಿಯಾದಿನಲ್ಲಿ ಫಜ್ರ್ ನಮಾಝ್ ಮಾಡಿ ಹೊರಟ ಯಾತ್ರೆ, ಮಗ್ರಿಬ್ ಆಗುವಾಗ ತ್ವಾಯಿಫಿನ ಖರ್ನ್ ಮನಾಝಿಲಿಗೆ ತಲುಪಿತು. ರಿಯಾದಿನಿಂದ ಉಮ್ರಾ ನಿರ್ವಹಿಸಲು ಬರುವವರಿಗೆ ಅದುವೇ ಮೀಖಾತ್. "ಮೀಖಾತ್" ಎಂದರೆ ಇಹ್ರಾಮ್ ಮಾಡುವ ಸ್ಥಳ.(ಹರಮಿನ ಹೊರಗೆ ಎಲ್ಲಿ ಬೇಕಾದರೂ ಇಹ್ರಾಂ ಮಾಡಬಹುದು).
4 ಮೀಖಾತುಗಳು ಇದೆ ಎಂದು ಹದೀಸ್ ಗ್ರಂಥಗಳಲ್ಲಿ ಕಾಣಬಹುದು.
1. ದುಲ್ ಹುಲೈಫ
2. ಜುಹ್ಫ
3. ಖರ್ನ್ ಮನಾಝಿಲ್
4. ಯಲಂಲಂ
ಭಾರತದಿಂದ ಉಮ್ರಾ ಅಥವಾ ಹಜ್ಜ್ ಯಾತ್ರೆ ಹೊರಡುವವರ ಮೀಖಾತ್ "ಯಲಂಲಂ".
✒️ ಹಾಫಿಝ್ ಸಿನಾನ್ ಕಬಕ
Comments
Post a Comment