ಹಿಜಾಬ್: ವಿಮರ್ಶನಾರ್ಹವೇ....?
ಹಿಜಾಬ್: ವಿಮರ್ಶನಾರ್ಹವೇ....?
_________________
ಮುಸ್ಲಿಂ ಸಮುದಾಯದ ಸ್ತ್ರೀಗಳು ಸ್ವಂತ ತಲೆ ಮರೆಸಲುಪಯೋಗಿಸುವ ಒಂದು ವಸ್ತ್ರವಾಗಿದೆ ಹಿಜಾಬ್.
ಮುಸ್ಲಿಂ ಸ್ತ್ರೀ ಗಳಿಗೆ ಇಸ್ಲಾಮಿಕ್ ಶರೀಅತ್ ಅದನ್ನು ಕಡ್ಡಾಯಗೊಳಿಸಿದೆ. ತನ್ನ ಶರೀರವನ್ನು ಅನ್ಯ ಕಣ್ಣುಗಳಿಂದ ಕಾಪಾಡಲು ಇಸ್ಲಾಂ ಇಂತಹ ನಿಯಮಗಳನ್ನು ಜಾರಿಗೊಳಿಸಿದೆ.
ಹೀಗೆ ನಿಯಮಗಳನ್ನು ಜಾರಿಗೊಳಿಸಿದ ಕಾರಣ, ಸ್ತ್ರೀಯರಿಗೆ ರಕ್ಷಣೆ ಹೊರತು ಯಾವುದೇ ಕೆಟ್ಟ ಪರಿಣಾಮ ಇಲ್ಲ.
ಇನ್ನು ಭೌತಿಕಯವಾಗಿ ನೋಡುವಾಗ, ಸ್ತ್ರೀಯರ ಚರ್ಮವು ಪುರುಷರ ಚರ್ಮಕ್ಕಿಂತ ತೆಳುವಾದದ್ದು. ಆದ್ದರಿಂದಲೇ, ಸೂರ್ಯಕಿರಣಗಳ ತೀಕ್ಷ್ಣತೆ ಗಳಿಂದ ಸ್ತ್ರೀಯರ ಚರ್ಮವನ್ನು ಸಂರಕ್ಷಿಸಲು ಪರ್ದಾ, ಹಿಜಾಬ್ ಧರಿಸಲು ಕಡ್ಡಾಯಗೊಳಿಸಿದ್ದು.
ಉಡುಪಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರ್ಭಂಧಿಸಿದ ಕಾರಣ ಕರ್ನಾಟಕವೇ ಅದರೆದುರು ಸಿಡಿಳೆದ್ದಿದೆ.....!
ಮುಸ್ಲಿಂ ಸಮುದಾಯಕ್ಕೆ ಇದೊಂದು ಪ್ರಶಂಸನೀಯ ವಿಷಯವೇ ಹೌದು. ಕಾರಣ, ಎಲ್ಲಾ ಮುಸ್ಲಿಮರು ಒಗ್ಗಟ್ಟಿನಲ್ಲಿ ನಿಂತು ತಮಗೆ ಅರ್ಹವಾದ ಅವಕಾಶವನ್ನು ಪ್ರತಿಭಟಿಸಿ ಪಡೆಯುತ್ತಿದ್ದಾರೆ.
ಆದರೆ, ಈ ಅವಕಾಶವು ಕೇವಲ ಶಾಲಾ - ಕಾಲೇಜುಗಳಿಗೆ ಮಾತ್ರ ಸೀಮಿತವಲ್ಲ. ತಮ್ಮ ನಿತ್ಯ ಜೀವನದಲ್ಲೂ ಇದು ಅನ್ವಯಿಸುತ್ತದೆ.
ಇಂದು ಸಾಮಾಜಿಕ ಜಾಲ ತಾಣಗಳಲ್ಲಿ ಅರ್ಧ ನಗ್ನವಾದ ಫೋಟೋವನ್ನು ಹರಿದುಬಿಡುವಾಗ, ಈ ಪ್ರತಿಭಟನೆ ನೆನಪಿರಬೇಕು.
ತಲೆ ಮರೆಸಲು ಉಪಯೋಗಿಸುವ ಹಿಜಾಬನ್ನು ವಿವಿಧ ಮೋಡಲ್ ಗಳಲ್ಲಿ ಹಾಕಿ, ತಲೆ, ಕುತ್ತಿಗೆ ಮತ್ತು ಮುಖ ಸಂಪೂರ್ಣವಾಗಿ ಮುಚ್ಚದೆ ಫೋಟೋ ತೆಗೆದು instagram, facebook ಮುಂತಾದ ಜಾಲ ತಾಣಗಳಲ್ಲಿ ಪ್ರಚಾರ ಮಾಡುವಾಗ ಇದು ನೆನಪಿರುವುದಿಲ್ಲ.
ಮನೆಯಲ್ಲಿ ಪೋಷಕರ ಎದುರಲ್ಲಿ ಸಂಪೂರ್ಣ ಮುಚ್ಚಿ, ಹೊರಗೆ ಇಳಿದು ಸ್ನೇಹಿತರ ಜೊತೆ ಅಥವಾ ಬೀಚ್, ಪಾರ್ಕ್ ಗಳಲ್ಲಿ ಸುತ್ತಾಡುವಾಗ, ಅದನ್ನೆಲ್ಲ ಬಿಚ್ಚಿ ತನ್ನ ಶರೀರಬಾಗಗಳನ್ನು ಪ್ರದರ್ಶಿಸಿ ನಡೆಯುವಾಗ, ಈ ಅವಕಾಶದ ಬಗ್ಗೆ ನೆನಪು ಬರುವುದಿಲ್ಲ.
ಇಸ್ಲಾಮಿನ ಚಿಹ್ನೆಗಳನ್ನು ದುರುಪಯೋಗ ಮಾಡಬಾರದು.
ಕೇವಲ ಸ್ಟೇಟಸ್ ಗಳಲ್ಲಿ ಮಾತ್ರ ಹಿಜಾಬಿನ ಫೋಟೋ ಹಾಕಿದ ಕೂಡಲೇ ನೈಜ ಮುಸ್ಲಿಂ ಆಗುವುದಿಲ್ಲ. ಅದನ್ನು ಉಪಯೋಗಿಸಿ ಅದರ ಬೆಲೆ ಮತ್ತು ಗೌರವ ಜನರಿಗೆ ತಿಳಿಸಬೇಕು.
Hafiz Sinan Kabaka
hafizsinan70@gmail.com
7022702610
Comments
Post a Comment