ನಿಮ್ಮ ಮನೆಗೆ ಧಾರ್ಮಿಕ ಸಂಸ್ಥೆಗಳಿಂದ ಕಲೆಕ್ಷನ್ ಗೆ ಬರುತ್ತಾರಾ ?
ನಿಮ್ಮ ಮನೆಗೆ ಧಾರ್ಮಿಕ ಸಂಸ್ಥೆಗಳಿಂದ ಕಲೆಕ್ಷನ್ ಗೆ ಬರುತ್ತಾರಾ ???
ಇಸ್ಲಾಂ ಧರ್ಮ, ದಾನ - ಧರ್ಮಕ್ಕೆ ಅತಿಯಾದ ಮಹತ್ವ ನೀಡಿದೆ. ಅದಕ್ಕೆ ಮಿತಿಯೇನೂ ಧರ್ಮ ಹೇಳಲಿಲ್ಲ. ನಮ್ಮಲ್ಲಿ ಇರುವುದೇನೋ ಅದನ್ನು ದಾನ ಮಾಡಿದರೆ ಸಾಕು ಎಂದು ಇಸ್ಲಾಂ ಕಲಿಸಿದೆ. ಬಡವರಿಗೆ, ವಿಧವೆಯರಿಗೆ, ಅನಾಥರಿಗೆ, ದೀನೀ ವಿಧ್ಯಾಭ್ಯಾಸ ಕಲಿಯುವ ವಿದ್ಯಾರ್ಥಿಗಳಿಗೆ, ಧಾರ್ಮಿಕ ವಿಧ್ಯಾಭ್ಯಾಸ ಕಲಿಸುವ ಸಂಸ್ಥೆಗಳಿಗೆ, ಹೀಗೆ ಕೆಲ ಪ್ರತ್ಯೇಕ ಜನರಿಗೆ ಅಥವಾ ಸಮೂಹಕ್ಕೆ ದಾನ ಧರ್ಮ ಮಾಡಿದರೆ ಪ್ರತ್ಯೇಕ ಪುಣ್ಯ ಧರ್ಮ ಹೇಳಿದೆ.
ಇಂದು ಅನೇಕ ಧಾರ್ಮಿಕ ಸಂಸ್ಥೆಗಳು ನಮ್ಮ ಸುತ್ತ ಮುತ್ತಲು ತಲೆಯೆತ್ತಿ ನಿಂತಿದೆ. ಅನೇಕ ಬಡ - ನಿರ್ಗತಿಕ ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳಲ್ಲಿ ಕಲಿತು ಬೆಳೆದು ಇಂದು ಉನ್ನತ ಸ್ಥಾನದಲ್ಲಿ ತಮ್ಮ ಜೀವನ ಮುಂದಕ್ಕೆ ಸಾಗಿಸುತ್ತಿದ್ದಾರೆ. ಅವರು ಇಂದು ಅಷ್ಟೂ ಎತ್ತರಕ್ಕೆ ಏರಲು ಕಾರಣ ಈ ಕಾಣುವ ಧಾರ್ಮಿಕ ಸಂಸ್ಥೆಗಳೇ ಆಗಿದೆ.
"ಈ ಧಾರ್ಮಿಕ ಸಂಸ್ಥೆಗಳು ಇಷ್ಟೂ ಮಕ್ಕಳ ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸುವುದು...??" ಎಂಬ ಪ್ರಶ್ನೆ ಇಂದು ಹಲವರ ಮನಸ್ಸಲ್ಲಿ ಕಾಡುತ್ತಿದೆ.
ಒಬ್ಬ ಮನುಷ್ಯನಿಗೆ ಬೇಕಾದ ಆಹಾರ, ವಸತಿ, ವಸ್ತ್ರ ಮುಂತಾದ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಮೂಲಕ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ನೀಡಿ ಬೆಳೆಸುವಾಗ ಈ ಪ್ರಶ್ನೆ ಸಾಧಾರಣ...ಅಲ್ವಾ... 😊
ಧರ್ಮವನ್ನು ಪ್ರೀತಿಸಿ, ಅಲ್ಲಾಹನ ಪ್ರತಿಫಲವನ್ನು ಮಾತ್ರ ಉದ್ದೇಶಿಸಿ ದಾನ ಮಾಡುವ ಸಹಾಯಿಗಳ ಸಂಪತ್ತಿನಿಂದಲೇ ಈ ವಿದ್ಯಾರ್ಥಿಗಳು ಬೆಳೆಯುವುದು ಎಂದು ಹೇಳಿದರೆ ನೀವು ನಂಬುತ್ತೀರಾ...?
ಹೌದು ನಮ್ಮ ಮನೆ ಬಾಗಿಲಿಗೆ ಬಂದು ಸಂಸ್ಥೆಯ ಕುರಿತು ಹೇಳಿ ನಮ್ಮಿಂದ ಸಿಕ್ಕಿದ ಹಣ ಪಡೆದು ನಮಗಾಗಿ ಪ್ರಾರ್ಥನೆ ಮಾಡಿ ಮರಳುವ ರೆಸೀವರ್ ಗಳಿಗೆ ಮತ್ತು ಮುತಅಲ್ಲಿಮರಿಗೆ ನಾವು ನೀಡುವ ಹಣದಿಂದಲೇ ಇಂತಹ ಸಂಸ್ಥೆಗಳು ಅಷ್ಟೂ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಯಲು ಅವಕಾಶ ಮಾಡಿ ಕೊಡುವುದು.
ಅವರು ನಮ್ಮ ಮನೆ ಬಾಗಿಲಿಗೆ ಬರುವಾಗ, ನಮಗೆ ಅಲ್ಲಿ ಕೆಲಸ ಕಡಿಮೆಯಾಗುತ್ತದೆ. ಅಂದರೆ, ಬಡವರನ್ನು ಅಥವಾ ಮೇಲೆ ಹೇಳಿದ ಯಾರನ್ನಾದರೂ ಹುಡುಕಿ ಹೋಗಿ ದಾನ ಮಾಡುವ ಕೆಲಸ ನಮಗೆ ಇವರ ಮೂಲಕ ಕಡಿತಗೊಳ್ಳುತ್ತದೆ.
ಆದ್ದರಿಂದ ನಮ್ಮ ಮನೆ ಬಾಗಿಲಿಗೆ ಯಾವುದಾದರೂ ಸಂಸ್ಥೆಯ ಅಥವಾ ದರ್ಸಿನ ಕಲೆಕ್ಷನ್ ಎಂದು ಬಂದರೆ ಒಮ್ಮೆಯೂ ಕೂಡಾ ಅವರನ್ನು ನಿರ್ಲಕ್ಷಿಸಬಾರದು. ನಮ್ಮಲ್ಲಿ ಇರುವುದನ್ನು ಅವರಿಗೆ ಕೊಟ್ಟರೆ, ಸಿಕ್ಕಿದ್ದನ್ನು ಪಡೆದು ಅವರು ಮರಳುತ್ತಾರೆ. ಕೊಡಲು ಏನೂ ಇಲ್ಲದಿದ್ದರೆ 'ಇಲ್ಲಿ ಏನೂ ಇಲ್ಲ' ಎಂದು ಸೌಮ್ಯವಾಗಿ ಹೇಳಿದರೆ ಅವರ ಪಾಡಿಗೆ ಅವರು ಹೋಗುತ್ತಾರೆ. ಅದರ ಬದಲು, ಅವರು ಮನೆಯ ಹೊರಗೆ ಬಂದು ಬೆಲ್ ಮಾಡಿದರೂ ಏನೂ ಮಾತನಾಡದೆ ಅವರ ಸಮಯ ನಷ್ಟವಾಗುವ ಹಾಗೆ ಮಾಡಬಾರದು. ಕೊಡಲು ಸಾಧ್ಯವಿರುವುದು ಕೊಡಿ, ಇಲ್ಲದಿದ್ದರೆ ಹೇಳಿ ಬಿಡಿ. ಮಕ್ಕಳಲ್ಲಿ 'ಇಲ್ಲಿ ಯಾರೂ ಇಲ್ಲ ಎಂದು ಹೇಳು' ಎಂದು ಹೇಳಿ ಕಳುಹಿಸಿದರೆ, ನಾಳೆ ಅವರು ದೊಡ್ಡವರಾಗಿ ನಿಮ್ಮ ಹಾಗೆಯೇ ಮಾಡಬಹುದು. ಸುಳ್ಳು ಹೇಳಲು ಕಲಿಯಬಹುದು. ಆದ್ದರಿಂದ ಯಾರಿಗೂ ನಮ್ಮಿಂದ ಏನೇ ದುಃಖ - ಕಷ್ಟ ಆಗಬಾರದು ಎಂಬ ದೃಢ ನಿರ್ಧಾರ ಕೈಗೊಂಡು ಜೀವಿಸೋಣ...
ಸೃಷ್ಟಿಕರ್ತನಾದ ಅಲ್ಲಾಹು ಅನುಗ್ರಹಿಸಲಿ - ಆಮೀನ್
✒️ ಹಾಫಿಝ್ ಸಿನಾನ್ ಕಬಕ
Comments
Post a Comment