ತಂದೆಗೆ ಥಾಂಕ್ಸ್ ಹೇಳಿದ ಮಗ

 ಒಬ್ಬ ಶ್ರೀಮಂತ ತಂದೆ ತನ್ನ ಮಗನನ್ನು ಕರೆದುಕೊಂಡು ಊರು ತೋರಿಸಲು ಹೊರಟ. ತಮ್ಮ ಸುತ್ತ ಮುತ್ತಲಿನ ಬಡವರು ಕಷ್ಟಪಟ್ಟು ಜೀವಿಸುವುದನ್ನು ತೋರಿಸುವುದಾಗಿತ್ತು ಆ ಶ್ರೀಮಂತ ತಂದೆಯ ಉದ್ದೇಶ. ಊರು ಪೂರ್ತಿ ಸುತ್ತಿ ಮರಳುವ ವೇಳೆ ತಂದೆ ಮಗನ ಬಳಿ ಕೇಳಿದ, 'ಮಗಾ...ಟ್ರಿಪ್ ಹೇಗೆ ಇತ್ತು'. 

ಮಗ  'ತುಂಬಾ ಚೆನ್ನಾಗಿತ್ತು ಅಪ್ಪಾ...' ಎಂದು ಉತ್ತರಿಸಿದ.

 ತಂದೆ ಕೇಳಿದ ' ನೋಡಿದ್ದೀಯಾ, ನಮ್ಮ ಸುತ್ತ ಮುತ್ತಲಿನ ಬಡವರು ಹೇಗೆ ಕಷ್ಟಪಟ್ಟು ಜೀವಿಸುತ್ತಾರೆ ಎಂದು...' 

'ಹಾ ಹೌದಪ್ಪ...' ಎಂದು ಮಗ ಉತ್ತರಿಸಿದ.

ತಂದೆ ಹೇಳಿದ, ಈ ಒಂದು ಟ್ರಿಪ್ ನಲ್ಲಿ ಏನಲ್ಲ ಕಲಿತೆ ನೀನು...? 

" ನಮಗೆ ಒಂದು ನಾಯಿ ಇದೆ, ಅವರಿಗೆ ನಾಲ್ಕು ಇದೆ...

 ನಮಗೆ ಸ್ವಿಮ್ಮಿಂಗ್ ಪೂಲ್ ಇದೆ, ಅವರಿಗೆ ದೊಡ್ಡ ಒಂದು ನದಿಯೇ ಇದೆ...

ನಮಗೆ ಟ್ಯೂಬ್ ಲೈಟ್ ಇದೆ, ಅವರಿಗೆ ತುಂಬಾ ನಕ್ಷತ್ರಗಳು ಇವೆ...

ನಾವು ಆಹಾರವನ್ನು ದುಡ್ಡು ಕೊಟ್ಟು ಖರೀದಿಸಿ ತಿನ್ನುತ್ತೇವೆ, ಅವರು ಸ್ವತಃ ಬೆಳೆಸಿ ತಿನ್ನುತ್ತಾರೆ...

ನಮಗೆ ರಕ್ಷಣೆಗೆ ಗೋಡೆಗಳಿವೆ, ಅವರಿಗೆ ಸ್ನೇಹಿತರು ಇದ್ದಾರೆ...

ನಮಗೆ ಕಾಲ ಹರಣಕ್ಕೆ ಟಿವಿ ಇದೆ, ಅವರಿಗೆ ದೊಡ್ಡ ಕುಟುಂಬವೇ ಇದೆ...

ನಾವಿಷ್ಟು ಬಡವರೆಂದು ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅಪ್ಪಾ ಎಂದು ಮಗ ಹೇಳಿದ...!!

ತಂದೆ ಮಾತೇ ಹೊರಡದೆ ಮೂಕನಾಗಿ ನಿಂತುಬಿಟ್ಟ.


ನೀತಿ: ನಾವು ಶ್ರೀಮಂತರೆಂದು ತೀರ್ಮಾನಿಸುವುದು ಕೇವಲ ಹಣ ನೋಡಿ ಅಲ್ಲ, ಹೊರತು... ಸರಳತೆ, ಪ್ರೀತಿ, ಸಹಾನುಭೂತಿ, ಸ್ನೇಹ, ಕುಟುಂಬ ಇತ್ಯಾದಿಗಳನ್ನು ನೋಡಿ ನಾವು ಶ್ರೀಮಂತರೋ ಬಡವರೋ ಎಂದು ತೀರ್ಮಾನಿಸುವುದು.


Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ