ಮೊದಲ ಬಾರಿ ಕವನ ವಾಚನ ಮಾಡಿದಾಗ

ಜೀವನದಲ್ಲಿ ಮೊದಲ ಬಾರಿಗೆ ಕವನ ವಾಚನ ಮಾಡಿದಾಗ...
➖➖➖➖➖➖➖➖
ಸಅದಿಯಾ ಕನ್ನಡ ವಿಧ್ಯಾರ್ಥಿ ಸಂಘಟನೆ ನಡೆಸಿದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಜೀವನದಲ್ಲಿ ಮೊದಲ ಬಾರಿ ಕವನ ವಾಚನ ಮಾಡಲು ಅವಕಾಶ ಸಿಕ್ಕಿತು. 
ಅಲ್ ಹಮ್ದುಲಿಲ್ಲಾಹ್...

ನನ್ನ ತಾಯಿಯ ತಮ್ಮ ಜಿ ಎಂ ಮುಆದ್ ರವರ ಕವನ ವಾಚನ ಕೇಳಿ ಮನಸ್ಸಿನಲ್ಲಿ ಬಹಳ ಆಸೆ ಮೂಡುತ್ತಿತ್ತು. ನನಗೂ ಒಮ್ಮೆ ಹೀಗೆ ಕವನ ವಾಚನ ಮಾಡಬೇಕು ಎಂದು. ಅನೇಕ ಬಾರಿ ಹಲವರ ಕವನ ವಾಚನ ಕೇಳುತ್ತಲೇ ಇದ್ದೆ. 
ಒಮ್ಮೆಯಾದರೂ ಕವನ ವಾಚನ ಮಾಡಬೇಕೆಂಬ ಆಸೆ ಮನಸ್ಸಲ್ಲಿತ್ತು.
ಸಅದಿಯಾ ಕನ್ನಡ ವಿಧ್ಯಾರ್ಥಿ ಸಂಘಟನೆ (MOKS) ಮುತಅಲ್ಲಿಮರಿಗೆ ನಡೆಸಿದ ಈ ಒಂದು ಕಾರ್ಯಕ್ರಮವು ಜೀವನದಲ್ಲಿ ಕವನಗಳ ಕುರಿತು ಕಲಿಯಲು ಮತ್ತು ವಾಚನ ಮಾಡಲು ಒಂದು ಸುವರ್ಣಾವಕಾಶ ಮಾಡಿ ಕೊಟ್ಟಿದೆ.
ಸಂಪೂರ್ಣವಾಗಿ ಕವನ ವಾಚನ ಮಾಡಲು ಬರದಿದ್ದರೂ... ಸಾಧ್ಯವಾದ ರೀತಿಯಲ್ಲಿ ವಾಚನ ಮಾಡಿದೆ.
ಅಲ್ ಹಂದುಲಿಲ್ಲಾಹ್...

ಇನ್ನೂ ಪದ ಬರೆದು ಕಲಿಯಲು ಅಲ್ಲಾಹು ತೌಫೀಖ್ ನೀಡಲಿ...
ತಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆ ಸದಾ ಇರಲಿ.

✒️ нαƒιz ѕιηαη кαвαкα
      12 -10 - 2023
         @ ಸಅದಿಯಾ 
      

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ