ಬದ್ರಿಗೆ ಹೋಗಿ ಬರೋಣ......🤍
ಬದ್ರಿಗೆ ಹೋಗಿ ಬರೋಣ......🤍
ಪ್ರವಾದಿ ﷺ ರು ಮತ್ತು ಸ್ವಹಾಬಿಗಳು ಮದೀನಾದಿಂದ ಹೊರಟರು.....
ಎಲ್ಲವೂ ಅಲ್ಲಾಹನ ಮೇಲೆ ತವಕ್ಕುಲ್ ಮಾಡಿ, ಉಪವಾಸಿಗರಾಗಿ ಮೈಲುಗಳು ದಾಟಿ ನಡೆಯಲಾರಂಭಿಸಿದರು......
'ಅಲ್ಲಾಹನ ಸಹಾಯ ಮತ್ತು ಪ್ರವಾದಿ ﷺ ರ ನೇತೃತ್ವ' ಇವೆರಡೇ ಸ್ವಹಾಬಿಗಳ ಆಯುಧ..........
ಸಾವಿರಕ್ಕಿಂತ ಹೆಚ್ಚು ಬರುವ ಶತ್ರುಪಕ್ಷವನ್ನು ಎದುರಿಸಲು ಉಪವಾಸಿಗರಾದ 313 ಸ್ವಹಾಬಿಗಳು ದಣಿದು ಹಸಿದು ಹೋರಾಡಿದರು..........
ಶತ್ರು ಪಕ್ಷದಿಂದ 70 ಮಂದಿ ಸಾವನ್ನಪ್ಪಿದರು, ಸ್ವಹಾಬಿಗಳಿಂದ 14 ಸ್ವಹಾಬರು ಶಹೀದ್ ಆದರು.......
'ಹೋಗುವ ದಾರಿಯಲ್ಲಿ ಸಿಗುವ ಗಿಡಮರಗಳನ್ನು ಅಕಾರಣವಾಗಿ ನೋಯಿಸಬಾರದು" ಎಂದಾಗಿತ್ತು ಪ್ರವಾದಿ ﷺ ರ ನಿರ್ದೇಶ.......
ಯುದ್ಧ ದ ಕಾರಣ ಹೇಳಿ ಯಾರೂ ಉಪವಾಸ ಬಿಡಲಿಲ್ಲ..... ನಮಾಝ್ ತಪ್ಪಿಸಲಿಲ್ಲ..... ಎಲ್ಲವೂ ಅಲ್ಲಾಹನ ಸಹಾಯದಿಂದ ಅಚ್ಚುಕಟ್ಟಾಗಿ ನಡೆಸಿದರು.......
ಪ್ರವಾದಿ ﷺ ರ ಪ್ರಾರ್ಥನೆಯ ಫಲವಾಗಿ ಅಲ್ಲಾಹನು ಆಕಾಶಲೋಕದಿಂದ ಮಲಕ್ಕುಗಳನ್ನೇ ಕಳುಹಿಸಿ ಕೊಟ್ಟ......
'ಯುದ್ಧ ದ ವೇಳೆ ಸ್ವಹಾಬರು ಶತ್ರುಗಳನ್ನು ಕೊಲ್ಲುವ ಮುನ್ನವೇ ಅವರು ನೆಲಕ್ಕುರುಳುತ್ತಿದ್ದರು........'
ಎಂದು ಸ್ವಹಾಬಿಯರು ಯುದ್ಧದ ಅನುಭವಗಳನ್ನು ಹೇಳುತ್ತಿದ್ದರು..........
ಕೇವಲ ಒಂದು ವಿಭಾಗ ಜನರ ಮಾತ್ರ ವಿಜಯವಲ್ಲ, ಇಸ್ಲಾಮಿನ ವಿಜಯವಾಗಿತ್ತು ಅಂದು ಬದ್ರಿನ ಯುದ್ಧಭೂಮಿಯಲ್ಲಿ ನಡೆದದ್ದು.....
ಕುಟುಂಬದವರೆಲ್ಲರನ್ನೂ ತೊರೆದು ಇಸ್ಲಾಮಿಗೆ ಬೇಕಾಗಿ ಹೋರಾಡಿದ ಸ್ವಹಾಬಿಯರಿಗೆ ಅಂದು ಇದ್ದದ್ದು ಒಂದೇ ಒಂದು ಲಕ್ಷ್ಯ.......ಇಸ್ಲಾಮಿನ ವಿಜಯ ಅಥವಾ ಶಹೀದ್......'
ಬೇರೆ ಯಾವ ಉದ್ದೇಶವೂ ಅವರಿಗಿರಲಿಲ್ಲ.......
ಯುದ್ಧ ಮುಗಿದು ಮದೀನಾಕ್ಕೆ ಮರಳುವಾಗ ಎಲ್ಲಾರೂ ತಮ್ಮ ತಮ್ಮ ಕುಟುಂಬದ ಜನರನ್ನು ಕಾಯುತ್ತುರಲಿಲ್ಲ.......
ಪ್ರವಾದಿ ﷺ ರನ್ನು ಕಾಯುತ್ತಿದ್ದರು.......
ಪ್ರವಾದಿ ﷺ ರ ಕಾಲಿಗೆ ಒಂದು ಮುಳ್ಳು ಚುಚ್ಚುವುದು ಕೂಡಾ ಮದೀನಾ ನಿವಾಸಿಗಳಿಗೆ ಇಷ್ಟವಿರಲಿಲ್ಲ........
ಇನ್ನು ಪ್ರವಾದಿ ﷺ ರು ಯುದ್ಧಕ್ಕೆ ಹೋದರೆ ಅವರ ಮನಸ್ಸು ಸುಮ್ಮನೆ ಇರಬಹುದೇ......!!!
ಯುದ್ಧಕ್ಕೆ ಹೋದಾಗಿನಿಂದ ಮರಳಿ ಬರುವವರೆಗೆ ಕಣ್ಣಿಗೆ ಎಣ್ಣೆ ಹಾಕಿ ಕಾಯುತ್ತಿದ್ದರು.......
ಯುದ್ಧ ಭೂಮಿಯಲ್ಲಿ ನಮಾಝಿನ ಸಮಯವಾದಾಗ ಸ್ವಲ್ಪ ಸ್ವಹಾಬಿಗಳು ನಮಾಝ್ ಮಾಡುವಾಗ ಬೇರೆ ಸ್ವಲ್ಪ ಸ್ವಹಾಬರು ಅವರಿಗೆ ಕಾವಲು ನಿಲ್ಲುತ್ತಿದ್ದರು........
ಹಂಝ (ರ) ಧೈರ್ಯ ಕಂಡು ಶತ್ರುಪಕ್ಷ ನಿಂತಲ್ಲಿಯೇ ನಡುಗುತ್ತಿದ್ದರು........
ಹೀಗೆ ಹಲವಾರು ಸ್ವಹಾಬರ ಧೀರ ಚರಿತ್ರೆಯನ್ನು ಅನುಸ್ಮರಿಸಿಕೊಂಡು......
ಮನಸ್ಸನ್ನು ಆ ಬದ್ರ್ ರಣಭೂಮಿಗೆ ಒಮ್ಮೆ ಕಳುಹಿಸಿ ನೋಡಿ.........
ಅಲ್ಲಿ ನಡೆದ ಒಂದೊಂದು ಘಟನೆ ಮನಸ್ಸಿನಲ್ಲಿ ನೆನೆಸಿ......
ರೋಮಾಂಚನ ಖಂಡಿತ.......😊
ಅಲ್ಲಾಹು ಆ ಸ್ವಹಾಬರ ಬರಕತ್ತ್ ನಮ್ಮ ಜೀವನದಲ್ಲಿ ನೀಡಲಿ......
آمين آمين آمين يا ربّ العالمين
➖➖➖➖➖➖➖➖➖➖➖➖➖
✒️ *нαƒιz ѕιηαη кαвαкα*
Comments
Post a Comment