ಮುಹರ್ರಂ - 1444

 ಮುಹರ್ರಂ - 1444


ಪ್ರವಾದಿ ﷺ ರು ಮಕ್ಕಾದಿಂದ ಮದೀನಕ್ಕೆ ತೆರಳಿದ ಅಂದಿನಿಂದ ಹಿಜರಿ ವರ್ಷ ಆರಂಭವಾಗಿದೆ.

ನಮ್ಮ ಸಾಧಾರಣ ಕ್ಯಾಲೆಂಡರ್ ಅನುಸರಿಸಿ ಹೊಸ ವರ್ಷ ಆಗಮಿಸುವ ವೇಳೆ ಹೊಸ ಹೊಸ ತೀರ್ಮಾನಗಳನ್ನು  ಕೈಗೊಳ್ಳುತ್ತೇವೆ. ಮೋಟಿವೇಶನಲ್ ಸ್ಪೀಕರ್ಸ್ ಹೇಳುವುದು ಕೇಳಿದ್ದೇನೆ "ಹೊಸ ವರ್ಷ ಬರುವಾಗ ನಮ್ಮ ಜೀವನದಲ್ಲಿ ಇದುವರೆಗೂ ಇಲ್ಲದ ಕೆಲವು ಒಳ್ಳೆಯ ಹೊಸ ಹೊಸ ಕಾರ್ಯಗಳನ್ನು ನಾವು ನಮ್ಮ ಜೀವನಕ್ಕೆ ತರಬೇಕು." ಅಂದರೆ, ಆಹಾರ ರೀತಿಯಲ್ಲಿ, ಬೆಳಿಗ್ಗೆ ಏಳುವ ಸಮಯದಲ್ಲಿ, ರಾತ್ರಿ ನಿದ್ದೆ ಮಾಡುವ ಸಮಯದಲ್ಲಿ, ಆರೋಗ್ಯದ ವಿಷಯದಲ್ಲಿ...ಹೀಗೆ ಹಲವು ವಿಷಯದಲ್ಲಿ ಬದಲಾವಣೆಯನ್ನು ಹೊಸ ವ್ವರ್ಷ ಆಗಮಿಸುವಾಗ ತರುವುದು ಉತ್ತಮ ಎಂದು ಮೋಟಿವೇಶನಲ್ ಸ್ಪೀಕರ್ಸ್ ಹೇಳುವುದು ಕೇಳಿದ್ದೇನೆ.

ನಮಗೆ ಈಗ ಬರುವುದು ಹಿಜರಿ ವರ್ಷ...

ಇಲ್ಲಿಯೂ ನಮಗೆ ನಮ್ಮ ಜೀವನ ರೀತಿಯಲ್ಲಿ ಬದಲಾವಣೆ ತರಬಹುದು.

ಆತ್ಮೀಯವಾದ ಬದಲಾವಣೆಯ ಕಡೆ ಗಮನ ಹರಿಸುವ...

ಇದುವರೆಗೂ ತಹಜ್ಜುದ್ ನಮಾಝ್ ಮಾಡದ ವ್ಯಕ್ತಿಯಾಗಿರಬಹುದು, ಳುಆ ನಮಾಝ್ ಮಾಡದ ವ್ಯಕ್ತಿಯಾಗಿರಬಹುದು, ಫರ್ಳ್ ನಮಾಜಿನ ಮುಂಚೆ ಮತ್ತು ನಂತರ ರವಾತೀಬ್ ನಮಾಝ್ ಮಾಡದ ವ್ಯಕ್ತಿಯಾಗಿರಬಹುದು... ಹೀಗೆ ಆತ್ಮೀಯವಾದ ಹಲವು ವಿಷಯಗಳಲ್ಲಿ ಹಿಂದೆ ಇರುವವರಾಗಿರಬಹುದು ನಾವು...

ಹೊಸ ವರ್ಷ ಆಗಮಿಸುವಾಗ ಮೇಲೆ ಹೇಳಿದ ಜೀವನ ರೀತಿಗೆ ನಮ್ಮ ಜೀವನವನ್ನು ಬದಲಾಯಿಸಲು ತೀರ್ಮಾನಿಸುವ...

ಬೆಳಿಗ್ಗೆ ಸಾಧಾರಣ ಏಳುವುದಕ್ಕಿಂತ ಸ್ವಲ್ಪ ಬೇಗನೇ ಎದ್ದು ಅಂಗಾಂಗ ಶುದ್ಧಿ ಮಾಡಿ (ಕನಿಷ್ಠ)ಎರಡು ರಕಅತ್ ನಮಾಝ್ ಮಾಡಿ ಅಲ್ಲಾಹನ ಬಳಿ ಪ್ರಾರ್ಥಿಸುವ...

ಬೆಳಿಗ್ಗೆ ಕೆಲಸಕ್ಕೆ ಅಥವಾ ಶಾಲೆಗೆ ಹೋಗುವುದಕ್ಕಿಂತ ಮುಂಚೆ ಳುಆ ಎಂಬ ಎರಡು ರಕಅತ್ ನಮಾಝ್ ಮಾಡಿ ಹೊರಡುವ...

ಯಾವಾಗಲೂ ನಿರ್ವಹಿಸುವ ಫರ್ಳ್ ನಮಾಜಿನ ಮುಂಚೆ ಮತ್ತು ನಂತರ  ಎರಡು ರಕಅತ್ (ನಾಲ್ಕು ಇರುವಲ್ಲಿ ನಾಲ್ಕು) ನಮಾಝ್ ಮಾಡಲು ತೀರ್ಮಾನಿಸುವ...


ರಂಝಾನ್ ತಿಂಗಳಲ್ಲಿ ಮಾತ್ರ ಖುರ್ಆನ್ ಪಠಿಸುವವರಿರಬಹುದು...

ಅವರು, ದಿನಾಲೂ ನಿರ್ದಿಷ್ಟ ಪುಟಗಳನ್ನು ನಿಶ್ಚಯಿಸಿ ಓದಲು ಶ್ರಮಿಸಬೇಕು...


ಹೀಗೆ ಹಲವಾರು ಆತ್ಮೀಯವಾದ ಬದಲಾವಣೆಗಳನ್ನು ನಮಗೆ ಈ ಹೊಸ ವರ್ಷ ಬರುವಾಗ ಕೈಗೊಳ್ಳೋಣ... ಇನ್ ಶಾ ಅಲ್ಲಾಹ್...


ಮೇಲೆ ಹೇಳಿದ ಸುನ್ನತ್ ನಮಾಝ್ ಗಳ ಮಹತ್ವವನ್ನು ಮುಂದೆ ಬರೆಯುತ್ತೇನೆ...

ಇನ್ ಶಾ ಅಲ್ಲಾಹ್...

✒️HSK

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ