ಕರೆಂಟ್ ಇರುವುದೇ ಇಲ್ಲ.....

 ಕರೆಂಟ್ ಇರುವುದೇ ಇಲ್ಲ.....

ಲೈನ್ ಮ್ಯಾನ್ ಗೆ ಪದೇ ಪದೇ ಕಾಲ್ ಗಳು ಹೋಗುತ್ತಲೇ ಇವೆ.....

ಯಾವಾಗ ನೋಡಿದರೂ ಲೈನ್ ಮ್ಯಾನ್ ಬಿಝಿ.....


ಹೀಗೆ ಹಲವಾರು ತೊಂದರೆಗಳು ನಮಗಿದೆ......


ಆ ಲೈನ್ ಮ್ಯಾನ್ ನ ಅವಸ್ಥೆ ಒಮ್ಮೆ ಯೋಚಿಸಿದ್ದೀರಾ......


ಎಲ್ಲೆಡೆಯೂ ಗಾಳಿಮಳೆ....

ಮರಗಳು ಉರುಳುತ್ತಿವೆ.....

ಕರೆಂಟ್ ವಯರ್ ನ ಮೇಲೆ ಮರ ಬಿದ್ದು ಕರೆಂಟ್ ಇರುವುದಿಲ್ಲ....

ಕರೆಂಟ್ ಕಂಬ ನೆಲಕ್ಕುರುಳಿ ಕರೆಂಟ್ ಇರುವುದಿಲ್ಲ.....


ಅದು ಸರಿ ಮಾಡಲು ಬೇಕಾಗಿ, ಅದೇ ಮಳೆಗೆ ಮೈಯೊಡ್ಡಿ ಕರೆಂಟ್ ಸರಿ ಮಾಡಲು ಮುಂದಾಗುವ ಲೈನ್ ಮ್ಯಾನ್ ಗೆ ಬೈದರೆ ಆಗಬಹುದೇ.....?!

ನೀರಿರುವಾಗ ಕರೆಂಟ್ ಶಾಕ್ ಆಗುತ್ತದೆ ಎಂದು ಶಾಲೆಯಲ್ಲಿ ನಾವು ಕಲಿದಿದ್ದೇವೆ......

ಆದರೆ, ಇವರು ನಮ್ಮ ಮನೆಯ / ಊರಿನ ಕರೆಂಟ್ ಸರಿ ಮಾಡಲು ಧಾರಾಕಾರವಾಗಿ ಸುರಿಯುವ ಮಳೆಯ ನಡುವೆ ಮುಂದೆ ಬರುತ್ತಾರೆ...... 


"ಅವರು ಅವರ ಕೆಲ್ಸ ಮಾಡ್ತಾರೆ... ಅದಕ್ಕೆ ಸಂಬಳ ಕೂಡಾ ಸಿಗ್ತದೆ" ಎಂದು ನಾವು ಹೇಳಬಹುದು.......


ಜೀವ ಎಲ್ಲರಿಗೂ ಒಂದೇ....ಅವರಿಗೂ ತಂದೆ ತಾಯಿ, ಮಡದಿ ಮಕ್ಕಳು ಇದ್ದಾರೆ ...... ಅವರಿಗೂ ಜೀವದ ಮೇಲೆ / ಜೀವನದ ಮೇಲೆ ಆಸೆ ಇದೆ.....


ದಯವಿಟ್ಟು ಅವರಿಗೆ ಬಯ್ಯದೆ....ಅವರ ಕಷ್ಟಗಳನ್ನು ಅರ್ಥೈಸಿ ಸ್ವಲ್ಪ ಮಟ್ಟಕ್ಕೆ ಸಹಿಸಿಕೊಳ್ಳೋಣ........


HSK ✒️

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ