ಸುನ್ನತ್ ಉಪವಾಸ
ನಮ್ಮಲ್ಲಿ ಹಲವರೂ ಸುನ್ನತ್ ಉಪವಾಸ ಹಿಡಿಯುವವರು.
ಆದರೆ ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡದೆ, ಎರಡನೇ ಸ್ಥಾನದಲ್ಲಿ ನಾವು ಅದನ್ನು ಇಡುತ್ತೇವೆ.
ಆದರೆ ಸ್ವಹಾಬಿಯರು ಸುನ್ನತ್ ಉಪವಾಸವನ್ನೂ ದೊಡ್ಡ ಒಂದು ಆರಾಧನೆಗಾಗಿ ಕಂಡಿದ್ದಾರೆ.
ನಮಗೆ ಉದಾಹರಣೆ ನೋಡೋಣ......
ಅಬ್ದುಲ್ ರಹ್ಮಾನ್ ಔಫ್ (ರ) ರ ಬಳಿ ಒಂದು ತಟ್ಟೆ ಆಹಾರ ತಂದಿಟ್ಟರು. ಆದರೆ ಮಹಾನರಿಗೆ ಅಂದು ಉಪವಾಸವಿತ್ತು.
ಮಹಾನರು ಹೇಳಿದರು... " ಹಾ.....! ಮುಸ್ಅಬ್ (ರ) ವಫಾತಾದರು, ಅವರು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು, ಅವರನ್ನು ಕಫನ್ ಮಾಡುವಾಗ ಒಂದು ತುಂಡು ಬಟ್ಟೆ ಮಾತ್ರ ಇದ್ದದ್ದು. ಅದರಿಂದ ಅವರ ಮಯ್ಯಿತ್ ನ ತಲೆ ಮರೆಸುವಾಗ ಕಾಲು ಮತ್ತು ಕಾಲು ಮಾರೆಸುವಾಗ ತಲೆ ಹೊರ ಕಾಣುತ್ತಿತ್ತು.....!!!!
ಕಾಲಚಕ್ರ ತುಂಬಾ ಉರುಳಿ ಹೋಯ್ತು. ಇಂದು ನಮಗೆ ಇಲ್ಲಿ ಅನೇಕ ಸುಖ ಸೌಕರ್ಯಗಳು ಇವೆ.ನನಗೆ ಭಯವಾಗುತ್ತಿದೆ, ಬಹುಶಃ ನಾವು ಮಾಡಿದ ಆರಾಧನೆಗಳಿಗೆ ಅಲ್ಲಾಹು ಇಹಲೋಕದಲ್ಲಿಯೇ ಪ್ರತಿಫಲ ನೀಡುತ್ತಿದ್ದಾನೆಯೇ.....? " ಎಂದು ಹೇಳಿ ಅವರು ಅತ್ತರು......!!!!
ಇಲ್ಲಿ ನಾವು ಚಿಂತಿಸಬೇಕು, ಪ್ರವಾದಿ ﷺ ರ ಸುನ್ನತ್ ಎಂಬ ನೆಲೆಯಲ್ಲಿ ಉಪವಾಸ ಹಿಡಿದ ಅಬ್ದುಲ್ ರಹ್ಮಾನ್ ಔಫ್ (ರ) ರವರ ಎದುರಲ್ಲಿ ಆಹಾರದ ತಟ್ಟೆ ಇಟ್ಟಾಗ, ಆಹಾರ ಕಂಡು ತನಗೆ ಆಹಾರದ ಆಸೆ ಬರದೇ ಇರಲು ಮುಸ್ಅಬ್ ಎಂಬ ಸ್ವಹಾಬಿಯ ಚರಿತ್ರೆಯನ್ನು ನೆನಪಿಸಿ ತನ್ನ ಈಮಾನನ್ನು ಶಕ್ತಿಗೊಳಿಸುತ್ತಾರೆ.......!!!!!!
✒️ HAFIZ MUHAMMAD SINAN KABAKA
Comments
Post a Comment