ಮದನೀಯಂ ಲತೀಫ್ ಸಖಾಫಿ ಉಸ್ತಾದರ ಮನೆಯಲ್ಲಿ

 


ಸಾಮಾನ್ಯ ಎಲ್ಲಾ ಮನುಷ್ಯರ ಜೀವನದ ಅತೀ ದೊಡ್ಡ ಆಸೆಗಳಲ್ಲಿ ಒಂದಾಗಿದೆ ಅಲ್ಲಾಹನ ಭೂಮಿಯಲ್ಲಿ ವಾಸಿಸಲು ಸ್ವಂತವಾಗಿ ಒಂದು ಮನೆ. ಹಾಗೆ ಸ್ವಂತ ಮನೆ ಕಟ್ಟಿ ಅದರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕುಟುಂಬಸ್ಥರನ್ನು, ಸ್ನೇಹಿತರನ್ನು ಮತ್ತು ನೆರೆಕರೆಯವರನ್ನು ಕರೆದು ಮನೆಯಲ್ಲೊಂದು ಬುರ್ದಾ ಮಜ್ಲಿಸ್ ಅಥವಾ ಮೌಲಿದ್ ಮಜ್ಲಿಸ್ ಮಾಡಿ ಬರಕತ್ ಪಡೆಯುವುದು ಸಾಧಾರಣ ನಡೆದು ಬರುತ್ತದೆ. ಇಂದು ಒಂದು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ದೆ. ಬೇರೆ ಯಾರದ್ದೂ ಅಲ್ಲ, *ಮದನೀಯಂ ಲತೀಫ್ ಸಖಾಫಿ ಉಸ್ತಾದರ* ಮನೆಯ ಗೃಹ ಪ್ರವೇಶ ಕಾರ್ಯಕ್ರಮ. ಮುಖ್ಯಾತಿಥಿ *ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್...*

ಲತೀಫ್ ಸಖಾಫಿ ಉಸ್ತಾದರ ಅತೀ ದೊಡ್ಡ ಆಸೆಯಾಗಿತ್ತು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಸುಲ್ತಾನುಲ್ ಉಲಮಾರ ಬುಖಾರಿ ದರ್ಸ್...

ಪವಿತ್ರ ಖುರ್ಆನಿನ ನಂತರ ಲೋಕದಲ್ಲಿ ಅತೀ ಮಹತ್ವವಾದ ಗ್ರಂಥವಾಗಿದೆ ಸ್ವಹೀಹುಲ್ ಬುಖಾರಿ. ಲೋಕದ ವಿವಿಧ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಸ್ವಹೀಹುಲ್ ಬುಖಾರಿಯ ದರ್ಸ್ ನಡೆದು ಬರುತ್ತಿದೆ. ಮಲೇಷ್ಯಾ ಸರ್ಕಾರ ಪ್ರತೀ ವರ್ಷ ವಿಜೃಂಭಣೆಯಾಗಿ ನಡೆಸುವ ಅಂತರಾಷ್ಟ್ರೀಯ ಸ್ವಹೀಹುಲ್ ಬುಖಾರಿ ದರ್ಸ್ ಗೆ ಶೈಖುನಾ ಸುಲ್ತಾನುಲ್ ಉಲಮಾರನ್ನು ಮುಖ್ಯಾತಿಥಿಯಾಗಿ ಗೌರವಿಸಿದ್ದು ನಾವೆಲ್ಲರೂ ಕಂಡಿದ್ದೇವೆ. ಭಾರತದ ವಿವಿಧ ಪ್ರದೇಶಗಳಲ್ಲಿ ಸ್ವಹೀಹುಲ್ ಬುಖಾರಿ ಪಾರಾಯಣಗೈದು ಬರಕತ್ ಪಡೆಯುವವರೂ ಇದ್ದಾರೆ.

ಅನೇಕ ವರ್ಷಗಳಿಂದ ಶೈಖುನಾರ ಸ್ವಹೀಹುಲ್ ಬುಖಾರಿ ದರ್ಸ್ ಅಡೆತಡೆಯಿಲ್ಲದೆ ಮರ್ಕಝ್ ಮತ್ತು ಇತರ ಸಂಸ್ಥೆಗಳಲ್ಲಿ ನಡೆದು ಬರುತ್ತಿದೆ. ಆ ಶೈಖುನಾರ ಸ್ವಹೀಹುಲ್ ಬುಖಾರಿ ದರ್ಸ್ ತನ್ನ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಇಡಬೇಕು ಎಂದು ಆಸೆಪಟ್ಟಿದ್ದಾರೆ ಮದನೀಯಂ ಲತೀಫ್ ಸಖಾಫಿ ಉಸ್ತಾದರು. ಅಲ್ಲಾಹು ಆ ಮನೆಯಲ್ಲಿ ಬರಕತ್ ನೀಡಿ ಅನುಗ್ರಹಿಸಲಿ ಆಮೀನ್.


✒️ ಹಾಫಿಝ್ ಸಿನಾನ್ ಕಬಕ 

       06 - 01 - 2025

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ