ಉಸ್ಥಾದರನ್ನು ಭೇಟಿಯಾದಾಗ
ಮೊನ್ನೆ (14-12-2024) ಸ್ನೇಹಿತನ ತಂಗಿಯ ಮದುವೆಗೆ ಹೋಗಿದ್ದೆ. ಅಲ್ಲಿ ನನಗೆ ಮುಜಮ್ಮಇನಲ್ಲಿ ಮೊದಲು ಕಲಿಸಿದ ನೌಫಲ್ ನಈಮಿ ಉಸ್ತಾದರು ಸಿಕ್ಕಿದರು. ನಮ್ಮನ್ನು ಕಂಡಾಗ ನಗುಮುಖದಿಂದ ಕೈಕೊಟ್ಟು ಸ್ವೀಕರಿಸಿದರು. ಎಲ್ಲಾ ವಿಶೇಷಗಳು ಕೇಳಿ ತಿಳಿದ ಮೇಲೆ, ಭವಿಷ್ಯದ ಕುರಿತು ಸ್ವಲ್ಪ ವಿಷಯ ಹೇಳಿ ಕೊಟ್ಟರು. "ನಾವು ಏನೇ ಮಾಡಿದರೂ ಕೂಡಾ ಜೀವಿಸಲು ಬೇಕಾಗಿ ಏನಾದರೂ ಒಂದು ಸಾಮರ್ಥ್ಯವನ್ನು ಕಲಿತಿರಬೇಕು. ಎಲ್ಲಾ ವಿಷಯಗಳಲ್ಲೂ ಅಲ್ಪ ಸ್ವಲ್ಪ ಜ್ಞಾನವಾದರೂ ಪಡೆದಿರಬೇಕು. ಏನೇ ಆದರೂ ಅದು ನಮ್ಮಿಂದ ಸಾಧ್ಯವಿಲ್ಲ ಎಂಬ ತೊಂದರೆ ಬರಬಾರದು". ಹೀಗೆ ಹಲವು ಸದುಪದೇಶಗಳು ಹೇಳಿಕೊಟ್ಟರು. ಅಲ್ ಹಂದುಲಿಲ್ಲಾಹ್ ಸಂತೋಷವಾಯಿತು. ನಮ್ಮಿಂದ ದೂರ ಸರಿದರೂ ಕೂಡಾ ನಮ್ಮ ವಿಜಯದ ಕುರಿತು ಯೋಚಿಸುತ್ತಿರುವ ಉಸ್ತಾದರುಗಳು ನಮಗಿದ್ದಾರೆ ಎಂಬ ಧೈರ್ಯ ನಮಗಿದೆ. ಅಲ್ಲಾಹು ನಮ್ಮ ಎಲ್ಲಾ ಉಸ್ತಾದರುಗಳಿಗೆ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ ಆಮೀನ್
Comments
Post a Comment