ಇಸ್ರಾಅ್ - ಮಿಅ್ ರಾಜ್ ಮತ್ತು ನಮಾಝ್

 ಇಸ್ರಾಅ್ - ಮಿಅ್ ರಾಜ್ ಮತ್ತು ನಮಾಝ್

➖➖➖➖➖➖➖➖

✒️ ಹಾಫಿಝ್ ಸಿನಾನ್ ಕಬಕ

➖➖➖➖➖➖➖➖

ನಮಗೆ ಅತೀ ಹೆಚ್ಚು ಪ್ರೀತಿ ಇರುವ ಒಬ್ಬರನ್ನು ಭೇಟಿಯಾಗಲು ನಾವು ಯಾವಾಗಲೂ ಆಸೆಪಡುತ್ತೇವೆ. ಎಷ್ಟು ಕಷ್ಟಗಳನ್ನಾನುಭವಿಸಿಯಾದರೂ ನಾವು ಅವರನ್ನು ಭೇಟಿಯಾಗುತ್ತೇವೆ.

ಪ್ರವಾದಿ ﷺ ರನ್ನು ಅಲ್ಲಾಹನು ತನ್ನ ಬಳಿ ಬರಲು ಎಲ್ಲಾ ರೀತಿಯ ಸಂವಿಧಾನ ಏರ್ಪಡಿಸಿ ಕೊಟ್ಟ. ಕೇವಲ ಒಂದು ರಾತ್ರಿಯಲ್ಲಿ ಏಳಾಕಾಶ ದಾಟಿ ಅಲ್ಲಾಹನನ್ನು ದರ್ಶಿಸಿ ಬಂದರು.ಯಾತ್ರೆಯುದ್ದಕ್ಕೂ ಸಂಪೂರ್ಣ ರಕ್ಷಣೆ ನೀಡಿ ಜೊತೆಗೆ ಮಲಕುಲ್ ಅಮ್ಲಾಕ್ ಜಿಬ್ರೀಲ್ (ಅ) ರನ್ನು ಕೂಡ ನೇಮಿಸಿದ.

ಅಲ್ಲಾಹನನ್ನು ಭೇಟಿಯಾಗಿ ಮರಳುವಾಗ ಪ್ರವಾದಿ ﷺ ರಿಗೆ ಅಲ್ಲಾಹು ಪ್ರೀತಿಯಿಂದ ಒಂದು ಬಹುಮಾನವನ್ನು ನೀಡಿದ. ಆ ಬಹುಮಾನವನ್ನು ಇಂದು ಲೋಕ ಮುಸಲ್ಮಾನರು ದಿನಾಲೂ ಸ್ಮರಿಸುತ್ತಿದ್ದಾರೆ.

ಅದೇ ನಾವು ದಿನಾಲೂ ನಡೆಸುತ್ತಿರುವ 5 ವಕ್ತ್ ನಮಾಝ್.

50 ವಕ್ತ್ ನಮಾಝನ್ನು 5 ವಕ್ತ್ ನಮಾಝಾಗಿ ಕಡಿತಗೊಳಿಸಿದ್ದು ಉಮ್ಮತ್ತಿಗೆ ಬೇಕಾಗಿ...!

ಆ 5 ವಕ್ತ್ ನಮಾಝನ್ನು ನಾವು ಪೂರ್ಣ ಮನಸ್ಸಿನಿಂದ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು.

ಇದರಿಂದ ಪ್ರವಾದಿ ﷺ ರ ಪ್ರೀತಿ ಮತ್ತು ಅಲ್ಲಾಹನ ಪ್ರೀತಿ ಪಡೆಯಲು ಸಾಧ್ಯ...

ಅಲ್ಲಾಹು ಕರುಣಿಸಲಿ ...ಆಮೀನ್

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ