ರಸ್ತೆ ಅಪಘಾತಗಳು ಹೆಚ್ಚುತ್ತಿದೆ....!😭
ರಸ್ತೆ ಅಪಘಾತಗಳು ಹೆಚ್ಚುತ್ತಿದೆ....!😭
"ಇನ್ನೇನು 5 ನಿಮಿಷದಲ್ಲಿ ತಲುಪುತ್ತೇನೆ"🏍️
ಎಂದು ಸ್ನೇಹಿತನಲ್ಲಿ ಹೇಳಿ ಮೊಬೈಲ್ ಕೀಸೆಗೆ ಹಾಕಿ ಅಮ್ಮನಲ್ಲಿ "ಸಲಾಂ" ಹೇಳಿ ಮನೆಯಿಂದ ಹೊರಗಿಳಿಯುವಾಗ ಅಮ್ಮನ ಮಾತು "ಜಾಗ್ರತೆಯಿಂದ ಹೋಗು ಮಗಾ" ಎಂದು......!🧑🍼
ದಿನಾಲೂ ಮನೆಯಿಂದ ಹೊರಗಿಳಿಯುವಾಗ ಅಮ್ಮನ ಈ ಮಾತು ಕೇಳುವುದರಿಂದ ಅವನು ಅದನ್ನು ಕಿವಿಗೆ ತೆಗೆದುಕೊಳ್ಳದೆ ತಂದೆ ತೆಗೆದು ಕೊಟ್ಟ ಬೈಕ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟ.......🧏🧏♂️
ಪದೇ ಪದೇ ಸ್ನೇಹಿತನ ಫೋನ್ ಕಾಲು ಗಳು ಬರುವುದಕ್ಕೆ ಅನುಸರಿಸಿ ಇವನ ಬೈಕ್ ನ ಸ್ಪೀಡ್ ಹೆಚ್ಚುತ್ತಲೇ ಇತ್ತು......📲
ಹೀಗೆ ಹೋಗಿ ಯಾವುದಾದರೂ ಲಾರಿಗೋ ಬಸ್ಸಿಗೋ ಮುಖಾಮುಖಿಯಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾರೆ...... 😭
ಇದೇ ಈಗ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವುದು....😔
ತನ್ನನ್ನು ಹೆತ್ತು ಹೊತ್ತು ಸಾಕಿದ, ಬೇಕಾದ ಎಲ್ಲವನ್ನೂ ನಿನಗೆ ನೀಡಿದ ನಿನ್ನ ತಂದೆ ಮತ್ತು ತಾಯಿ ಮನೆಯಲ್ಲಿ ನಿನಗೋಸ್ಕರ ಕಾಯುತ್ತಿರುವುದು ನಿನ್ನ ಬರುವಿಕೆಗಾಗಿ.....🏃♂️🏃♂️
ಅವರ ಕಣ್ಣೆದುರು ನಿನ್ನ ಮಯ್ಯಿತನ್ನು ತಂದಿಡುವಾಗ ಅವರು ಮನ ನೊಂದು ಕಣ್ಣೀರಿಡುತ್ತಾರೆ...... 😭
ತಂದೆ ತಾಯಿಯ ಕಣ್ಣೀರಿಗೆ ನಿನ್ನ ಬೈಕ್ ನ ವೇಗ ಕಾರಣವಾಗುತ್ತದೆ......🏃♂️🏍️
ಬೇಡ ಸ್ನೇಹಿತಾ ಬೇಡ .....🙏
5 ನಿಮಿಷ ತಡವಾದರೂ ಪರವಾಗಿಲ್ಲ.....ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸ್ವಲ್ಪ ವೇಗ ನಿಯಂತ್ರಿಸಲು ಶ್ರಮಿಸು.....🚶♂️
ತಲುಪಲು 5 ನಿಮಿಷ ಅಥವಾ 10 ನಿಮಿಷ ತಡವಾದ ಕಾರಣ ನಿನ್ನ ಸ್ನೇಹಿತ ಅಥವಾ ಬೇರೆ ಯಾರೂ ಕೂಡಾ ನಿನ್ನನ್ನು ಬಿಟ್ಟು ಹೋಗಲಾರ...... 🫂
"ಅವಸರವೇ ಅಪಘಾತಕ್ಕೆ ಕಾರಣ" ಎಂಬ ಗಾದೆ ಮಾತು ನೆನಪಿಟ್ಟುಕೊಂಡು ವಾಹನದಲ್ಲಿ ಯಾತ್ರೆ ಮಾಡು......🏍️🚗
ಅಲ್ಲಾಹನ ಭೂಮಿಯಲ್ಲಿ ಅಲ್ಲಾಹನಿಗೆ ಇಷ್ಟವಾದ ರೀತಿಯಲ್ಲಿ ಇನ್ನೂ ಜೀವಿಸಬೇಕು ಎಂಬ ಆಸೆಯಿಂದ ಯಾತ್ರೆ ಮಾಡು......😊⚠️
✒️ ಯಾತ್ರಿಕ
©️HSK
Comments
Post a Comment